ವಿಟ್ಲ: ಅಳಿಕೆ ಗ್ರಾಮದ ಕುದ್ದುಪದವು ಮನೆಯಿಂದ 48 ಗ್ರಾಂ ಚಿನ್ನಾಭರಣ ಹಾಗೂ ನಗದು ಕಳವುಗೈದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುದ್ದುಪದವು ನಿವಾಸಿ ಝಬೈದಾ ಅವರ ಮನೆಗೆ ಫೆ. 19ರ ರಾತ್ರಿ 8ರಿಂದ ಫೆ. 20ರ ರಾತ್ರಿ 8ರ ನಡುವೆ ಆರ್‌ಸಿಸಿ ಛಾವಣಿಯ ದ್ವಾರವನ್ನು ಆಯುಧದಿಂದ ಒಡೆದು ಒಳಗೆ ಪ್ರವೇಶಿಸಿದ ಕಳ್ಳರು ಮಲಗುವ ಕೋಣೆಯಲ್ಲಿದ್ದ ಕಪಾಟನ್ನು ಮುರಿದು ಅದರಲ್ಲಿದ್ದ 8 ಗ್ರಾಂ ತೂಕದ ಮಗುವಿನ ಕೈ ಚೈನ್, ತಲಾ 8 ಗ್ರಾಂ ತೂಕದ ಮಗುವಿನ 2 ಕಾಲು ಚೈನ್, 12 ಗ್ರಾಂ ತೂಕದ ಸರ, 12 ಗ್ರಾಂ ತೂಕದ ಕೈ ಬಳೆ ಹಾಗೂ ಕಪಾಟಿನಲ್ಲಿದ್ದ 15 ಸಾವಿರ ರೂ. ನಗದು ದೋಚಿದ್ದಾರೆ. ಕಳ್ಳತನ ಮಾಡಿ ಮನೆಯ ಅಡುಗೆ ಕೋಣೆಯ ಬಾಗಿಲಿನಿಂದ ಹೊರಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.