Advertisement

ಅಡಿಕೆ ದಾಸ್ತಾನು ಕೊಠಡಿಯಲ್ಲಿ ಅಕ್ರಮ ಮದ್ಯ ಮಾರಾಟ: ಆರೋಪಿ ವಶಕ್ಕೆ

11:09 PM Feb 05, 2023 | Team Udayavani |

ವಿಟ್ಲ : ಅಳಿಕೆ ಗ್ರಾಮದ ಕುದ್ದುಪದವು ವ್ಯಕ್ತಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಸ್ಥಳಕ್ಕೆ ವಿಟ್ಲ ಪೊಲೀಸರು ಧಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ ಘಟನೆ ಶನಿವಾರ ಸಂಭವಿಸಿದೆ.

Advertisement

ಕುದ್ದುಪದವು ನಿವಾಸಿ ಆನಂದ ಪೂಜಾರಿ ತನ್ನ ಮನೆಯ ಪಕ್ಕದಲ್ಲಿರುವ ಅಡಿಕೆ ದಾಸ್ತಾನು ಕೊಠಡಿಯಲ್ಲಿ ಮದ್ಯದ ಬಾಟಿÉಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ, ವಿಟ್ಲ ಠಾಣಾ ಪಿಎಸ್‌ಐ ಸಂದೀಪ್‌ ಕುಮಾರ್‌ ಶೆಟ್ಟಿ ಅವರು ಪೊಲೀಸರೊಂದಿಗೆ ದಾಳಿ ಮಾಡಿದಾಗ ಆನಂದ ಪೂಜಾರಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆತನನ್ನು ಹಿಡಿದು ವಿಚಾರಿಸಿದಾಗ ಯಾವುದೇ ಪರವಾನಿಗೆ ಯಾ ದಾಖಲಾತಿಗಳನ್ನು ಹೊಂದದೆ ಕೊಠಡಿಯೊಳಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ.

ಮೈಸೂರು ಲ್ಯಾನ್ಸರ್‌ ಕಂಪನಿಯ 90 ಒಐನ ಟೆಟ್ರಾ ಪ್ಯಾಕೇಟ್‌ಗಳು-61, ಒರಿಜಿನಲ್‌ ಚಾಯ್ಸ ಕಂಪನಿಯ 90 ಒಐನ ಟೆಟ್ರಾ ಪ್ಯಾಕೇಟ್‌ಗಳು-19ನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ-2800/-ರೂಪಾಯಿ ಆಗಬಹುದು. ಒಟ್ಟು ಮದ್ಯವು 7.200 ಲೀಟರ್‌ ಇರುತ್ತದೆ. ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಜಯಪುರ: ತಪ್ಪು ಔಷಧಿ ಸಿಂಪಡಣೆಗೆ ಹಾಳಾದ ದ್ರಾಕ್ಷಿ; ರೈತ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next