ವಿಟ್ಲ: ಮನೆ ಹಿಂಭಾಗದ ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲ ಸಮೀಪದ ಕಾಶಿಮಠ ಕೊಪ್ಪಳ ಎಂಬಲ್ಲಿ ಮಂಗಳವಾರ ನಡೆದಿದೆ.
ಕಾಶಿಮಠ ಕೊಪ್ಪಳ ನಿವಾಸಿ ಸಂಜೀವ ಶೆಟ್ಟಿ (65) ಮೃತ ವ್ಯಕ್ತಿ.
ಸಂಜೀವ ಶೆಟ್ಟಿ ರಾತ್ರಿ ಎಂದಿನಂತೆ ಮನೆಯಲ್ಲಿ ಮಲಗಿದ್ದರು. ಮುಂಜಾನೆ ಕುಟುಂಬಸ್ಥರು ಮನೆಯಿಂದ ಹೊರ ಬಂದ ವೇಳೆ, ಮರದಲ್ಲಿ ನೇಣುಬಿಗಿದುಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ: ಸಿಎಂ ಬೊಮ್ಮಾಯಿ ಈಶ್ವರಪ್ಪ ಕುರಿತು ಹೇಳಿದ್ದೇನು ?
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಕೇಪು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನಾಲ್ಕು ಮಂದಿ ನಾಲ್ಪೋಳುಗಳ ಪೈಕಿ ಇವರು ಓರ್ವರಾಗಿದ್ದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.