Advertisement
“ಸರಕಾರ ಪ್ರಯಾಣ ನಿರ್ಬಂಧ ಗಳನ್ನು ಹೇರಿರುವುದರಿಂದ ವಿಶಿಗೆ ಸದ್ಯ ಭಾರತಕ್ಕೆ ಮರಳಲು ಸಾಧ್ಯವಾಗುವುದಿಲ್ಲ, ಶೀಘ್ರವಾಗಿ ಕುಟುಂಬದ ಜತೆ ಸೇರಿಕೊಳ್ಳಲಿದ್ದಾರೆ. ಬುಂಡೆಸ್ಲಿಗಾ ಚೆಸ್ ಲೀಗ್‌ನಲ್ಲಿ ಪಾಲ್ಗೊಂಡ ಬಳಿಕ ಅವರು ಭಾರತಕ್ಕೆ ವಾಪಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶಕ್ಕೆ ಹೋಗುವುದು, ಬರುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಆನಂದ್ ಉಳಿದುಕೊಂಡಿದ್ದಾರೆ’ ಎಂದು ಪತ್ನಿ ಅರುಣಾ ತಿಳಿಸಿದ್ದಾರೆ.
ರಶ್ಯದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಚೆಸ್ ಕೂಟದಲ್ಲಿ ವಿಶ್ವನಾಥನ್ ಆನಂದ್ ಕಾಮೆಂಟ್ರಿ ಮಾಡಲಿದ್ದಾರೆ ಎಂಬುದು ಇನ್ನೊಂದು ಸುದ್ದಿ.
ಈ ಬಗ್ಗೆ ಮಾಹಿತಿ ನೀಡಿದ ಅರುಣಾ, “ಇದೇ ಮೊದಲ ಬಾರಿಗೆ ವೃತ್ತಿ ಜೀವನದ ಇನ್ನೊಂದು ಮಜಲನ್ನು ಏರುತ್ತಿರುವ ವಿಶ್ವನಾಥನ್ ಆನಂದ್, ಸದ್ಯ ತಾವಿರುವ ಜಾಗದಿಂದಲೇ ಮಂಗಳವಾರದಿಂದ ವೆಬ್‌ಸೈಟ್‌ಗೆ
ಕಾಮೆಂಟ್ರಿ ಹೇಳಲಿದ್ದಾರೆ. ಇದರಿಂದ ಅವರ ಏಕಾಂಗಿತನ ಸ್ವಲ್ಪ ಕಡಿಮೆಯಾಗಬಹುದು, ಜತೆಗೆ ಸಮಯ ಸಿಕ್ಕಾಗಲೆಲ್ಲ ಮಗನ ಜತೆಗೆ ಚಾಟ್, ವೀಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾರೆ. ವಿಶಿಗೆ ಕೆಲವು ದಿನಗಳು ಉಳಿದುಕೊಳ್ಳುವಂತೆ ಸೂಚನೆ ಇದೆ. ಸದ್ಯ ಅವರು ಏಕಾಂಗಿಯಾಗಿದ್ದಾರೆ. ಕೊರೊನಾ ಹರಡುವ ಭೀತಿಯಿಂದ ಜನಸಂಪರ್ಕ ಮಾಡುತ್ತಿಲ್ಲ’ ಎಂದರು.