ನವದೆಹಲಿ: ವಿಸ್ತಾರ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ಏರ್‌ಲೈನ್ಸ್ ವಿಲೀನಗೊಳುತ್ತಿದ್ದು, ಭಾರತದ ವೈಮಾನಿಕ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ವಿಲೀನ ಪ್ರಕ್ರಿಯೆಯು 2024ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ವಿಲೀನ ಕುರಿತು ಮಂಗಳವಾರ ಘೋಷಣೆ ಮಾಡಿರುವ ಟಾಟಾ ಗ್ರೂಪ್, ಒಪ್ಪಂದದ ಭಾಗವಾಗಿ ಏರ್ ಇಂಡಿಯಾದ ಶೇ. 25.1ರಷ್ಟು ಪಾಲನ್ನು ಸಿಂಗಾಪುರ ಏರ್‌ಲೈನ್ಸ್ ಹೊಂದಲಿದೆ. ಉಳಿದ ಪ್ರಮುಖ ಪಾಲು ಟಾಟಾ ಗ್ರೂಪ್ ಬಳಿ ಇರಲಿದೆ.
ಅದೇ ರೀತಿ ವಿಸ್ತಾರ ಏರ್‌ಲೈನ್ಸ್‌ನಲ್ಲಿ ಟಾಟಾ ಗ್ರೂಪ್ ಶೇ. 51ರಷ್ಟು ಪಾಲು ಹೊಂದಿದೆ. ಉಳಿದ ಶೇ. 49ರಷ್ಟು ಪಾಲು ಸಿಂಗಾಪುರ ಏರ್‌ಲೈನ್ಸ್ ಹೊಂದಿದೆ. ಒಪ್ಪಂದದ ಭಾಗವಾಗಿ ಸಿಂಗಾಪುರ ಏರ್‌ಲೈನ್ಸ್ ಏರ್ ಇಂಡಿಯಾದಲ್ಲಿ 2,058.5 ಕೋಟಿ ರೂ. ಹೂಡಿಕೆ ಮಾಡಲಿದೆ.
2015ರ ಜನವರಿಯಲ್ಲಿ ವಿಸ್ತಾರ ಏರ್‌ಲೈನ್ಸ್ ತನ್ನ ವಿಮಾನ ಸೇವೆಯನ್ನು ಆರಂಭಿಸಿತು. ಈ ವರ್ಷದ ಜನವರಿಯಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಏರ್‌ಲೈನ್ಸ್ ಅನ್ನು ಟಾಟಾ ಗ್ರೂಪ್ ಖರೀದಿಸಿತು.