Advertisement
ಕೊರೊನಾ ಕಾರಣದಿಂದ ಯಶವಂತಪುರ – ಕಾರವಾರ ಹಗಲು ರೈಲು ಸ್ಥಗಿತಗೊಂಡ ಬಳಿಕ ಅದೇ ಸಮಯದಲ್ಲಿ ವಿಸ್ಟಾಡೋಮ್ ಪ್ರವಾಸಿ ಬೋಗಿಯಿರುವ ರೈಲನ್ನು ಯಶವಂತಪುರದಿಂದ ಮಂಗಳೂರು ತನಕ ಓಡಿಸಲಾಗುತ್ತಿತ್ತು. ಇದರಿಂದ ಕುಂದಾಪುರ, ಕಾರವಾರ ಭಾಗದ ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ನಿರಾಸೆಯಾಗಿತ್ತು.
Related Articles
Advertisement
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಅನಂತ ಕುಮಾರ್ ಹೆಗಡೆ, ಶಾಸಕರಾದ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಮಟಾದ ದಿನಕರ್ ಶೆಟ್ಟಿ ಅವರ ಸಹಕಾರ ಮತ್ತು ನಮ್ಮ ಹೋರಾಟದಿಂದ ವಿಸ್ಟಾಡೋಮ್ ರೈಲು ಕಾರವಾರದವರೆಗೆ ವಿಸ್ತರಿಸಲು ಸಾಧ್ಯವಾಗಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.
ಆ.16ಕ್ಕೆ ರೈಲು ಆಗಮನ :
ವಿಸ್ಟಾಡೋಮ್ ರೈಲು ಉಡುಪಿ, ಕುಂದಾಪುರಕ್ಕೆ ಆ. 16ರಂದು ಬರಲಿದ್ದು, ಆ ದಿನ ಸಂಜೆ ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಸ್ವಾಗತ ಕಾರ್ಯಕ್ರಮವಿದೆ. ಉಡುಪಿ, ಕುಂದಾಪುರ, ಬೈಂದೂರು, ಕಾರವಾರದವರೆಗೆ ಅತ್ಯಾಧುನಿಕ ಸೌಲಭ್ಯಗಳಿರುವ ಈ ಬೋಗಿಗಳಲ್ಲಿ ಪ್ರಯಾಣಿಸಿದರೆ, ಪಂಚಗಂಗಾವಳಿ ನದಿ, ಗೋಕರ್ಣ, ಮುಡೇìಶ್ವರ, ಕಡಲ ಕಿನಾರೆ, ಒತ್ತಿನೆಣೆ ಗುಡ್ಡ ಸಹಿತ ಇನ್ನಿತರ ಸಹಜ ಸೌಂದರ್ಯದ ಪ್ರಾಕೃತಿಕ ಸೊಬಗನ್ನು ಸವಿಯುವ ಅವಕಾಶ ಪ್ರಯಾಣಿಕರಿಗೆ ಸಿಗಲಿದೆ.