Advertisement

ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್

07:49 PM May 24, 2022 | Team Udayavani |

ತಿರುವನಂತಪುರಂ: ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ(22) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳದ ಕೊಲ್ಲಂ ನ್ಯಾಯಾಲಯ ಆಕೆಯ ಪತಿ ಕಿರಣ್‌ ಕುಮಾರ್‌ಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದೆ.

Advertisement

ಮೊದಲಿಗೆ ನ್ಯಾಯಾಲಯವು ಕಿರಣ್‌ಗೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಕ್ಕೆ 6 ವರ್ಷ, ವರದಕ್ಷಿಣೆಗಾಗಿ ಹಿಂಸಿಸಿದ್ದಕ್ಕೆ 2 ವರ್ಷ, ವರದಕ್ಷಿಣೆ ಪಡೆದಿದ್ದಕ್ಕಾಗಿ 6 ವರ್ಷ ಮತ್ತು ಮತ್ತೂ ಹೆಚ್ಚು ವರದಕ್ಷಿಣೆ ತರಲು ಹೇಳಿ ಹಲ್ಲೆ ನಡೆಸಿದ್ದಕ್ಕಾಗಿ 1 ವರ್ಷದ ಜೈಲುಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ:ಅಮರನಾಥ ಯಾತ್ರೆಗೆ ಹೆಚ್ಚುವರಿ ಭದ್ರತಾ ಕ್ರಮ: ಸಿಆರ್‌ಪಿಎಫ್

“ತಂದೆ ತಾಯಿ ಇಬ್ಬರಿಗೂ ಆರೋಗ್ಯ ಸರಿಯಿಲ್ಲ. ಕುಟುಂಬ ನನ್ನ ಮೇಲೇ ನಿಂತಿದೆ. ಹಾಗಾಗಿ ಶಿಕ್ಷೆಯ ಅವಧಿ ಕಡಿಮೆ ಮಾಡಿ’ ಎಂದು ಕಿರಣ್‌ ಮನವಿ ಮಾಡಿದ ನಂತರ ನ್ಯಾಯಾಲಯ ಶಿಕ್ಷೆಯನ್ನು 10 ವರ್ಷಗಳಿಗೆ ಇಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next