Advertisement
ಸ್ಟೇಟ್ ಬ್ಯಾಂಕ್ ಬಳಿಯ ಆಧಾರ್ ಕೇಂದ್ರ ಪರಿಶೀಲಿಸಿ ಅಲ್ಲಿನ ಸಮಸ್ಯೆ ಆಲಿಸಿದ ಸಚಿವರು, ಈಗಿರುವ ಕೇಂದ್ರದಲ್ಲಿ ಹೆಚ್ಚುವರಿ ಕಂಪ್ಯೂಟರ್ ಅಳವಡಿಸಲು ಸೂಚನೆ ನೀಡಿದರು. ಹೆಚ್ಚುವರಿ ಕೇಂದ್ರ ಸ್ಥಾಪನೆ ಬಗ್ಗೆ ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಶವಾಗಾರ ಕೇಂದ್ರ ಕಿರಿದಾಗಿದ್ದು, ಏಕಕಾಲದಲ್ಲಿ ಎರಡು ಪ್ರಕರಣ ನಡೆದರೆ ಇಲ್ಲಿ ವ್ಯವಸ್ಥೆ ಇಲ್ಲ ಎಂಬ ಮಾಹಿತಿ ಪಡೆದ ಸಚಿವರು, ಹೊಸ ಕಟ್ಟಡಕ್ಕೆ ಅನುದಾನ ಒದಗಿಸಲಾಗುವುದು ಎಂದರು. ಭೇಟಿಯ ಸಂದರ್ಭದಲ್ಲಿ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್ ಕುಂಞಿ ಅಹಮ್ಮದ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ರಾಜೀವ ಗಾಂಧಿ ವಿ.ವಿ.
ಸಿಂಡಿಕೇಟ್ ಸದಸ್ಯ ಡಾ| ರಘು, ವಕ್ಫ್ ರಾಜ್ಯ ಸದಸ್ಯ ಸಂಶುದ್ದೀನ್, ಧನಂಜಯ ಅಡ್ಪಂಗಾಯ, ಮುಸ್ತಾಫ ಕೆ.ಎಂ., ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ, ಆಶೋಕ್ ನೆಕ್ರಾಜೆ, ಜಿ.ಕೆ. ಹಮೀದ್, ಭವಾನಿಶಂಕರ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ ಉಪಸ್ಥಿತರಿದ್ದರು.
Related Articles
ಅರಂಬೂರು ಸೇತುವೆ ವೀಕ್ಷಿಸಿದ ಸಚಿವರು, ಜೂನ್ ಮೊದಲ ವಾರದಲ್ಲಿ ಸಂಚಾರ ಮುಕ್ತವಾಗಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದರು. ಸೇತುವೆ ಫಿಲ್ಲರ್ ಮಧ್ಯೆ ಡ್ಯಾಂ ರಚನೆ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕು ಕಚೇರಿ ಬಳಿಯಲ್ಲಿನ ಇಂದಿರಾ ಕ್ಯಾಂಟಿನ್ ಕಾಮಗಾರಿ ಪರಿಶೀಲಿಸಿದ ಸಚಿವರು, ಆದಷ್ಟು ಬೇಗ ಕಾರ್ಯಾರಂಭಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
Advertisement
ಸರಕಾರಿ ಆಸ್ಪತ್ರೆಗೆ ಭೇಟಿತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಸ್ಕ್ಯಾನಿಂಗ್ ಯಂತ್ರ ಇದ್ದರೂ ತಪಾಸಣೆಗೆ ತಜ್ಞರು ಯಾಕಿಲ್ಲ ಎಂದರು. ತಜ್ಞ ವೈದರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅಲ್ಲಿಯ ತನಕ ಖಾಸಗಿ ಸೆಂಟರ್ ಜತೆ ಮಾತುಕತೆ ನಡೆಸಿ ಸರಕಾರಿ ಆಸ್ಪತ್ರೆಯಿಂದ ತೆರಳುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಮಾಡುವಂತೆ, ಕ್ಯಾಶುವಲಿಟ್ ಕೊಠಡಿ ವಿಸ್ತರಣೆಗೆ ಸೂಚನೆ ನೀಡಿದರು. ವೈದ್ಯರ, ಸಿಬಂದಿ ಕೊರತೆ ಬಗ್ಗೆ ವೈದ್ಯಾಧಿಕಾರಿ ಡಾ| ಭಾನುಮತಿ ಅವರಿಂದ ಮಾಹಿತಿ ಪಡೆದರು. ಬೆಡ್ ವ್ಯವಸ್ಥೆ ಕೊರತೆ ಇರುವ ಬಗ್ಗೆ ವೈದ್ಯಾಧಿಕಾರಿ ಗಮನ ತಂದರು. ಆಸ್ಪತ್ರೆಯಲ್ಲಿ ಇರುವ ಉಳಿಕೆ ಹಣದಿಂದ ಖರೀದಿಸುವಂತೆ ಸಚಿವರು ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಉಪಸ್ಥಿತರಿದ್ದರು.