Advertisement

ಇದು ಬುಲೆಟ್ ಬಾಬಾ ಟೆಂಪಲ್: ಇಲ್ಲಿ ರಾಯಲ್ ಎನ್ ಫೀಲ್ಡ್ ಗೆ ನಿತ್ಯ ಪೂಜೆ

03:21 PM Jul 26, 2021 | ಗಣೇಶ್ ಹಿರೇಮಠ |
ಈ ಬಾಬಾಗೆ ಪ್ರಾರ್ಥನೆ ಸಲ್ಲಿಸಿದ ತರುವಾಯ ಚಾಲಕರು ತಮ್ಮ ಪ್ರಯಾಣವನ್ನು ಆರಂಭಿಸುತ್ತಾರಂತೆ. ಈ ಬುಲೆಟ್ ಬಾಬಾನಿಗೆ ಹಣ್ಣು-ಕಾಯಿ ನಿಷಿದ್ಧ. ಅದರ ಬದಲಿಗೆ ಒಂದು ಮದ್ಯದ ಬಾಟಲ್ ನೈವೇದ್ಯವಾಗಿ ಅರ್ಪಿಸುತ್ತಾರೆ. ಈ ದೇವನಿಗೆ ನೈವೇದ್ಯವನ್ನು ಸರ್ಮಪಿಸುವ ಸಮಯದಲ್ಲಿ ವಾಹನ ಸವಾರರು ತಮ್ಮ ವಾಹನದ ಹಾರ್ನ್‍ನನ್ನು ವಿಪರೀತವಾಗಿ ಶಬ್ದ ಮಾಡುತ್ತಾರೆ. ಹೀಗೆ ನೈವೇದ್ಯ ಬುಲೆಟ್ ಬಾಬಾಗೆ ಅರ್ಪಿಸಿದರೆ ಗ್ರಾಮಸ್ಥರನ್ನು ಸುರಕ್ಷಿತವಾಗಿ ಕಾಪಾಡುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ.
Now pay only for what you want!
This is Premium Content
Click to unlock
Pay with

ನಮ್ಮ ದೇಶದಲ್ಲಿ ಸಾಕಷ್ಟು ಮಠ-ಮಂದಿರಗಳಿವೆ. ಒಂದೇ ದೇವರಿಗೂ ನೂರಾರು ದೇವಾಲಯಗಳಿವೆ. ನಿತ್ಯ ಲಕ್ಷಾಂತರ ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಾಲಯಗಳಿಗೆ ಹೋಗಿ ಬರುವುದು ನಿತ್ಯ ನಡೆಯುತ್ತಲೆ ಇದೆ. ಇಲ್ಲೊಂದು ದೇವಸ್ಥಾನ ಇದೆ. ಅದು ಬುಲೆಟ್ ಬೈಕ್ ಗಾಗಿ ನಿರ್ಮಿಸಿದ ಗುಡಿ. ಹೌದು, ಇದು ಕೇಳಲು ಸ್ವಲ್ಪ ಕುತೂಹಲ ಎನ್ನಿಸಿದರು ಕೂಡ ಸತ್ಯ.ನಮ್ಮ ದೇಶದಲ್ಲಿ ಮೂರು ಕೋಟಿ ದೇವತೆಗಳಿದ್ದಾರೆ. ನಮಗೆ ಕಷ್ಟಗಳು ಬಂದು ಒದಗಿದರೆ ಸಂಕಟದಲ್ಲಿದ್ದಾಗ ವೆಂಕಟ ರಮಣನೆಂಬಂತೆ ದೇವಾಲಯಗಳಿಗೆ ಭೇಟಿ ನೀಡಿ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಸ್ವಚ್ಚವಾದ ಮನಸ್ಸಿನಿಂದ ಕೇಳಿಕೊಳ್ಳುತ್ತೇವೆ.

Advertisement

ಇಲ್ಲೋಂದು ಸ್ವಲ್ಪ ವಿಭಿನ್ನವಾದ ಬಾಬಾ ಇದ್ದಾನೆ. ಆ ಬಾಬಾ “ಬುಲೆಟ್ ಬಾಬಾ”. ಬುಲೆಟ್ ಗಾಡಿಗೂ ಬಾಬಾ ಇದ್ದಾರೆಯೇ ಎಂದು ಆಶ್ಚರ್ಯಗೊಳ್ಳಬೇಡಿ. ಬುಲೆಟ್ ಗಾಡಿಯೇ ಬಾಬಾ. ಸಾಮಾನ್ಯವಾಗಿ ಈಗಿನ ಯುವಕರಿಗೆ ಬುಲೆಟ್ ಬೈಕ್ ಎಂದರೆ ಪಂಚ ಪ್ರಾಣ. ಎದೆ ನಡುಗಿಸುವಂತೆ ಡ್ರೈವಿಂಗ್ ಮಾಡಬೇಕು ಹೆಣ್ಣು ಮಕ್ಕಳ ಗಮನವನ್ನು ಸೆಳೆಯಬೇಕು ಎಂದು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಬುಲೆಟ್ ಬೈಕ್ ಮೇಲೆ ಆಸೆ ಇರುವವರು ಅಷ್ಟೇ ಏಕೆ ಬೈಕ್ ಗಳ ಬಗ್ಗೆ ಕ್ರೇಜ್ ಹಾಗೂ ಲಾಂಗ್ ಡ್ರೈವ್ ಮಾಡೋ ಹವ್ಯಾಸಿಗರು ಖಂಡಿತವಾಗಿಯೂ ಈ ಲೇಖನವನ್ನು ಓದಲೇಬೇಕು.

ಈ ದೇವಾಲಯವು ರಾಜಸ್ಥಾನ ರಾಜ್ಯದ ಚೋಟಿಲಾ ಎಂಬ ಗ್ರಾಮದಲ್ಲಿ ಜೋದಾಪುರ ನಗರಕ್ಕೆ ಸುಮಾರು 50 ಕಿ,ಮೀ ದೂರದಲ್ಲಿ ಈ ದೇವಾಲಯವಿದೆ. ಈ ದೇವಸ್ಥಾನದಲ್ಲಿ 350 ಸಿಸಿ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕೇ ನಿತ್ಯ ಪೂಜಿಸಲ್ಪಡುವ ದೇವರು. ಭಕ್ತಿಯಿಂದ ಬೇಡಿಕೊಂಡರೆ ಈ ದೇವರು ರಸ್ತೆ ಅಪಘಾತದಿಂದ ಕಾಪಾಡುತ್ತದೆಯಂತೆ. ಹಾಗಾಗಿ ಇಲ್ಲಿ ಸ್ಥಳೀಯರು ಈ ಬುಲೆಟ್ ಬಾಬಾನನ್ನು ಭಕ್ತಿಯಿಂದ ಪೂಜಿಸುತ್ತಾರಂತೆ.

ಭಕ್ತರು ಬೈಕ್ ಸವಾರಿ ನಡೆಸುವಾಗ ಯಾವುದೇ ರ್ದುಘಟನೆಯಾಗದಂತೆ ರಕ್ಷಿಸು ಎಂದು ಬುಲೆಟ್ ಬಾಬಾನನ್ನು ಕೇಳಿಕೊಳ್ಳುತ್ತಾರಂತೆ. ಈ ಬಾಬಾಗೆ ಪ್ರಾರ್ಥನೆ ಸಲ್ಲಿಸಿದ ತರುವಾಯ ಚಾಲಕರು ತಮ್ಮ ಪ್ರಯಾಣವನ್ನು ಆರಂಭಿಸುತ್ತಾರಂತೆ. ಈ ಬುಲೆಟ್ ಬಾಬಾನಿಗೆ ಹಣ್ಣು-ಕಾಯಿ ನಿಷಿದ್ಧ. ಅದರ ಬದಲಿಗೆ ಒಂದು ಮದ್ಯದ ಬಾಟಲ್ ನೈವೇದ್ಯವಾಗಿ ಅರ್ಪಿಸುತ್ತಾರೆ. ಈ ದೇವನಿಗೆ ನೈವೇದ್ಯವನ್ನು ಸರ್ಮಪಿಸುವ ಸಮಯದಲ್ಲಿ ವಾಹನ ಸವಾರರು ತಮ್ಮ ವಾಹನದ ಹಾರ್ನ್‍ನನ್ನು ವಿಪರೀತವಾಗಿ ಶಬ್ದ ಮಾಡುತ್ತಾರೆ. ಹೀಗೆ ನೈವೇದ್ಯ ಬುಲೆಟ್ ಬಾಬಾಗೆ ಅರ್ಪಿಸಿದರೆ ಗ್ರಾಮಸ್ಥರನ್ನು ಸುರಕ್ಷಿತವಾಗಿ ಕಾಪಾಡುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ.

ಇಂಟ್ರೆಸ್ಟಿಂಗ್ ಹಿನ್ನೆಲೆ :

Advertisement

ಬುಲೆಟ್ ಬಾಬಾ ಟೆಂಪಲ್ ಹಿನ್ನೆಲೆ ರೋಚಕ ಹಾಗೂ ಕುತೂಹಲಕಾರಿಯಾಗಿದೆ. ಚೋಟಿಲಾ ಗ್ರಾಮದಲ್ಲಿರುವ ಈ ಬೈಕಿಗೆ ಚರಿತ್ರೆ ಇದೆ. ಈ ಬೈಕ್ ಚೆನ್ನಾಗಿ ಬಾಳಿದ ಕುಟುಂಬದ ಓಂ ಸಿಂಗ್ ರಾಥೋರ್ ಗೆ ಸೇರಿದ್ದು. 1988ರಲ್ಲಿ ನಡೆದ ಒಂದು ದುರಂತ ಅಪಘಾತದಲ್ಲಿ ಓಂ ಸಿಂಗ್ ರಾಥೋರ್ ಈ ಬೈಕಿನಿಂದ ಮರಕ್ಕೆ ಡಿಕ್ಕಿ ಹೊಡೆದನು. ನಂತರ ರಾಥೋರ್ ಅಲ್ಲಿಯೇ ಸಾವನ್ನಪ್ಪಿದ್ದರು.

ಅಪಘಾತಕ್ಕೀಡಾಗಿದ್ದ ಈ ಬೈಕ್ ಸ್ಥಳೀಯ ಪೊಲೀಸರು ಅದನ್ನು ಸ್ಟೇಷನ್ನಿಗೆ ತೆಗೆದುಕೊಂಡು ಬಂದರು. ಆಗಲೇ ರಹಸ್ಯ ಒಂದೊಂದೆ ಪ್ರಾರಂಭವಾಗುತ್ತದೆ. ಅದೇ ದಿನ ರಾತ್ರಿ ಸ್ಟೆಷನ್ ನಲ್ಲಿದ್ದ ಬೈಕ್ ಇದ್ದಕ್ಕಿದ್ದಂತೆ ಮಾಯವಾಗುತ್ತೆ. ತೀವ್ರ ಶೋಧ ನಡೆಸಿದಾಗ ಅಪಘಾತ ನಡೆದ ಸ್ಥಳದಲ್ಲಿ ಅದು ಪತ್ತೆಯಾಗುತ್ತೆ. ಪುನಃ ಅದನ್ನು ಸ್ಟೆಷನ್ ಗೆ ತರಲಾಗುತ್ತದೆ. ಆ ರಾತ್ರಿ ಕೂಡ ಬೈಕ್ ಮಾಯವಾಗಿ ಅಪಘಾತ ನಡೆದ ಸ್ಥಳದಲ್ಲಿ ಪ್ರತ್ಯಕ್ಷವಾಗುತ್ತದೆ. ಇದು ಯಾರದೋ ಕಿಡಿಗೇಡಿಗಳ ಕೃತ್ಯ ಎಂದು ಸುಮ್ಮನಾದ ಪೊಲೀಸರಿಗೆ ಪದೇ ಪದೆ ಘಟನೆ ಮರುಕಳಿಸಿದಾಗ ತಲೆ ನೋವಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಮುಂದಾದ ಪೊಲೀಸರು ಬೈಕ್ ನಲ್ಲಿದ್ದ ಪೆಟ್ರೋಲ್ ಖಾಲಿ ಮಾಡಿ ದಪ್ಪ ಕಬ್ಬಿಣದ ಚೈನುಗಳಿಂದ ಅದನ್ನು ಲಾಕ್ ಮಾಡುತ್ತಾರೆ. ಆ ದಿನ ರಾತ್ರಿಯೂ ಕೂಡ ಬೈಕ್ ಮತ್ತೆ ಮಾಯವಾಗುತ್ತದೆ. ಕೊನೆಗೆ ಇದನ್ನು ಒಂದು ನಿಗೂಢವಾಗಿ ಭಾವಿಸಿದ ಪೊಲೀಸರು ಈ ಬೈಕ್ ಅನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಿದರು. ಆದರೆ ಆ ಕುಟುಂಬದವರು ಗುಜರಾತ್‍ನಲ್ಲಿನ ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದರು. ಬೈಕ್ ಮಾರಿದ್ದರೂ ಕೂಡ ಅದು ಮತ್ತೇ ಅಪಘಾತವಾದ ಸ್ಥಳಕ್ಕೆ ತಲುಪುತ್ತಿತ್ತಂತೆ.

ಈ ವಿಚಿತ್ರ ವಿದ್ಯಮಾನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಳಿದಿದ್ದೆ ತಡ ಅವರಲ್ಲಿ ಕುತೂಹಲದ ಜೊತೆ ಭಯ-ಭಕ್ತಿಯೂ ಹುಟ್ಟಿಕೊಂಡಿತು. ಇದು ದೇವಾಲಯದ ರೂಪ ಪಡೆದು ಭಕ್ತಿಯ ಕೇಂದ್ರವಾಗಿ ಪರಿಣಮಿಸಿತು. ಅಂದಿನಿಂದ ಇಂದಿನವರೆಗೆ ನಿತ್ಯ ಇಲ್ಲಿ ಪೂಜೆ ಸಲ್ಲುತ್ತದೆ. ದೇಶದ ವಿವಿಧ ಪ್ರದೇಶಗಳಿಂದ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನ ನಿರ್ಮಾಣವಾದ ನಂತರ ಈ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎನ್ನುವ ಮಾತು ಗ್ರಾಮಸ್ಥರಿಂದ ಕೇಳಿ ಬರುತ್ತದೆ. ಇದು ಮೂಢ ನಂಬಿಕೆ ಎಂದು ಕೊಂಡು ಈ ಬಾಬಾ ದೇವಾಲಯದ ಮುಂದೆ ಹಾದು ಹೋದವರಿಗೆ ಹಾಗೂ ಪೂಜೆ ಮಾಡದಯೇ ಹಾದು ಹೋದವರಿಗೆ ಹಲವಾರು ಅಪಘಾತಗಳಾಗಿರುವ ನಿರ್ದಶನ ಕೂಡ ಇದೆಯಂತೆ.

*ಗಣೇಶ್ ಹಿರೇಮಠ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.