Advertisement

ನನಗೆ ಮಾತನಾಡಲು ಅವಕಾಶ ಕೊಡಿ; ಸ್ಪೀಕರ್ v/s ರಾಮಲಿಂಗಾ ರೆಡ್ಡಿ ಜಟಾಪಟಿ

09:54 AM Feb 21, 2020 | Nagendra Trasi |

ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಳೆ ವಂದನಾ ನಿರ್ಣಯ ಚರ್ಚೆ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ವಿಚಾರದಲ್ಲಿ ಅಸಮಾಧಾನಗೊಂಡ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.

Advertisement

ತನಗೆ ಮಾತನಾಡಲು ಅವಕಾಶ ಕೊಡಬೇಕು ಎಂದು ರೆಡ್ಡಿಯವರು ಕೇಳುತ್ತಿದ್ದಂತೆಯೇ ಸ್ಪೀಕರ್ ಕಾಗೇರಿ ಅವರು ಶಾಸಕ ಎಂಬಿ ವೀರಭದ್ರಯ್ಯನರಿಗೆ ಮಾತನಾಡುವಂತೆ ಸೂಚಿಸಿದ್ದರು.

ಇದರಿಂದ ಅಸಮಾಧಾನಕ್ಕೊಳಗಾದ ರಾಮಲಿಂಗಾ ರೆಡ್ಡಿ ಸ್ಪೀಕರ್ ವಿರುದ್ಧ ಆಕ್ಷೇಪ ಎತ್ತಿದ್ದರು. ಆಗ ಸ್ಪೀಕರ್ ನೀವು ಹಿರಿಯ ಸದಸ್ಯರು ನೀವೇ ಶಿಸ್ತನ್ನು ಉಲ್ಲಂಘಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಸದನಕ್ಕೆ ಒಂದು ಶಿಸ್ತಿದೆ ಎಂದರು. ಈ ವೇಳೆ ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಮಲಿಂಗಾ ರೆಡ್ಡಿ ನಿಮಗೆ ತೋಚಿದಂತೆ ಸದನ ನಡೆಸುವುದಲ್ಲ ಎಂದರು.

ಯಾರಿಗೆ ಮಾತನಾಡಲು ಹೇಳಬೇಕು, ಹೇಳಬಾರದು ಎಂಬುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು. ನೀವು ಸಭಾ ಪೀಠಕ್ಕೆ ಮರ್ಯಾದೆ ಕೊಡದಿದ್ದರೆ. ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಏತನ್ಮಧ್ಯೆ ಪ್ರಿಯಾಂಕ ಖರ್ಗೆ ರೆಡ್ಡಿಯವರನ್ನು ಸಮಾಧಾನಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next