Advertisement

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

08:54 PM Apr 24, 2024 | Team Udayavani |

ಶಿರಸಿ: ಗುಜರಾತ್ ‌ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿರಸಿಗೆ ಬಂದಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಬರುತ್ತಿದ್ದಾರೆ. ಶಿರಸಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ರಧಾನಿಯೊಬ್ಬರು ಶಿರಸಿಗೆ ಬರುತ್ತಿರುವುದು ನಮಗೂ ಖುಷಿ ಇಮ್ಮಡಿಸಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ‌ ಕಾಗೇರಿ ಹೇಳಿದರು.

Advertisement

ಬುಧವಾರ ಮಾರಿಕಾಂಬಾ ಜಿಲ್ಲಾ‌ ಕ್ರೀಡಾಂಗಣದಲ್ಲಿ ಪ್ರಧಾನಿ ಸ್ವಾಗತಕ್ಕೆ ನಡೆಸಲಾದ ಸಿದ್ಧತೆ ಪರಿಶೀಲಿಸಿ‌ ಮಾತನಾಡಿದರು.

ಅವರು ಏ.28ರಂದು ಬೆಳಿಗ್ಗೆ 11ಕ್ಕೆ ಶಿರಸಿಗೆ ಪ್ರಧಾನಿ ನರೇಂದ್ರ‌ ಮೋದಿ ಅವರು ಆಗಮಿಸಲಿದ್ದಾರೆ. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ. ಒಂದು‌ ಲಕ್ಷಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ ಎಂದರು.

ಮೋದಿ ಅವರು ಹಿಂದೆ ವಿಧಾನ ಸಭೆ‌ ಚುನಾವಣೆಗೆ ಅಂಕೋಲಾಕ್ಕೆ ಬಂದಿದ್ದರು. ಈ ಬಾರಿ ಶಿರಸಿಗೆ ಬರಲಿದ್ದಾರೆ. ತಿಬ್ಬಾದೇವಿ ಟೆಂಟ್ ಹೌಸ್ ಜರ್ಮನ್ ಟೆಂಟನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಳಸುತ್ತಿದ್ದೇವೆ.

ಪಾರ್ಕಿಂಗ್, ವೇದಿಕೆ, ಕಾರ್ಯಕ್ರಮ, ಇತರ ಸೌಲಭ್ಯ ಎಲ್ಲಕ್ಕೂ ಪ್ರತ್ಯೇಕ ಸಮಿತಿ ರಚಿಸಿ ಕೆಲಸವನ್ನು ಬಿಜೆಪಿ ಕಾರ್ಯಕರ್ತರು, ಪ್ರಮುಖರು ಮಾಡುತ್ತಿದ್ದಾರೆ. ಸಮಾರಂಭ ವ್ಯವಸ್ಥಿತಗೊಳಿಸಲು ಪ್ರಯತ್ನ ನಡೆದಿದೆ ಎಂದರು.

Advertisement

ಪ್ರಧಾನಿ ಮೋದಿ ಅವರು ಕೊಟ್ಟ ಅನೇಕ ಯೋಜನೆಗಳ ಫಲಾನುಭವಿಗಳು ದನ್ಯವಾದ ಸಲ್ಲಿಸಲು ಕಾಯ್ತಿದ್ದಾರೆ. ನರೇಂದ್ರ ಮೋದಿ ಅವರು ಮನೆ, ರೈತರು, ಆಯುಷ್ಮಾನ ಭಾರತ ಎಲ್ಲ ನೀಡಿದ್ದಾರೆ. ಅವರೂ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಜೊತೆಗೆ ಇದು ಇಡೀ ಕ್ಷೇತ್ರದ ಜನರು ದೊಡ್ಡ ಸಂಖ್ಯೆಯಲ್ಲಿ ಬರಲು ಇನ್ನೊಂದು ಕಾರಣವಿದೆ.

ಭಾವಬಾತ್ಮಕವಾಗಿ ರಾಮ‌ಮಂದಿರ ಕಟ್ಟಿದ ಬಳಿಕ ಬಂದ ಮೊದಲ ಚುನಾವಣೆ. ಅವರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ ಜನ ಎಂದರು.

ಪ್ರಜಾಪ್ರಭುತ್ವದ ಹಬ್ಬ, ಉತ್ಸವ ಚುನಾವಣೆ. ಮೋದಿ ಅವರ ಕಾರ್ಯಕ್ರಮಕ್ಕೆ ಬರುವವರಿಗೆ ಕಿರುಕುಳ ನೀಡಬಾರದು ಎಂದು ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡುವದಾಗಿ ಹೇಳಿದರು.

ಈ ವೇಳೆ ಪ್ರಸನ್ನ ಕೆರೆಕೈ, ಶ್ರೀನಿವಾಸ ಹೆಬ್ಬಾರ್, ಸದಾನಂಧ ಭಟ್ಟ, ಆನಂದ ಸಾಲೇರ, ಗುರುಪ್ರಸಾದ ಶಾಸ್ತ್ರಿ ಹರ್ತೆಬೈಲು, ಆರ್.ಡಿ.ಹೆಗಡೆ ಜಾನ್ಮನೆ, ಆರ್.ವಿ.ಚಿಪಗಿ, ಗಣಪತಿ ನಾಯ್ಕ, ನಾಗರಾಜ ನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next