Advertisement

ರಾಮಮಂದಿರವಷ್ಟೇ ಅಲ್ಲ; ರಾಮರಾಜ್ಯದ ಕನಸು: ಪೇಜಾವರ ಶ್ರೀ

12:10 AM Jul 05, 2022 | Team Udayavani |

ಮಂಗಳೂರು: ಅಯೋಧ್ಯೆಯಲ್ಲಿ 2024ರ ಮಕರ ಸಂಕ್ರಾತಿ ದಿನ ಶ್ರೀರಾಮಚಂದ್ರನ ಪ್ರತಿಷ್ಠೆ ನಡೆಯಲಿರುವುದು ನಿಶ್ಚಯ. ಆದರೆ ನಮ್ಮ ಕನಸು ಅಲ್ಲಿ ಶ್ರೀರಾಮ ಮಂದಿರ ಮಾಡುವುದೊಂದೇ ಅಲ್ಲ, ಬದಲಿಗೆ ರಾಮರಾಜ್ಯ ನಿರ್ಮಾಣ ಎಂದು ಪೇಜಾವರ ಮಠಾಧೀಶ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ವಿಶ್ವಸ್ಥ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಹರಿಪಾದಗೈದಿರುವ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಇಲ್ಲಿನ ಮಂಜು ಪ್ರಸಾದದಲ್ಲಿ ಸೋಮವಾರ ನಡೆದ ಗುರುವಂದನೆ ಹಾಗೂ ಪಟ್ಟದ ದೇವರಾದ ರಾಮವಿಠಲ ದೇವರಿಗೆ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.

ಗ್ರಾಮಗಳ ದತ್ತು
ಅಯೋಧ್ಯೆ ರಾಮಮಂದಿರ ನಿರ್ಮಾ ಣದ ಬಳಿಕ ಅದರ ಸುತ್ತುಪೌಳಿಯ ಅಭಿವೃದ್ಧಿಯಾಗ ಬೇಕಿದೆ. ಜತೆಯಲ್ಲೇ ರಾಮಮಂದಿರ ಟ್ರಸ್ಟ್‌ ಅಥವಾ ಇತರ ಸಂಸ್ಥೆಗಳ ನೆರವಿನೊಂದಿಗೆ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅದನ್ನು ಮಾದರಿ ರಾಮರಾಜ್ಯವಾಗಿ ರೂಪಿಸುವ ಯೋಜನೆ ಇದೆ. ಇದರ ಬಗ್ಗೆ ನಮ್ಮ ಸೂಚನೆಗಳನ್ನು ನೀಡಿದ್ದೇವೆ ಎಂದು ಸ್ವಾಮೀಜಿ ಹೇಳಿದರು.

ಅದು ಕೊನೆಯಲ್ಲ ಆರಂಭ
ಶ್ರೀರಾಮ ಮಂದಿರ ನಿರ್ಮಾಣವೇ ಕೊನೆಯಲ್ಲ, ನಮಗೆ ಅದಕ್ಕಿಂತ ಮಹತ್ವವಾದ ಉದ್ದೇಶವಿದೆ. ಅದು ರಾಮ ರಾಜ್ಯದ ನಿರ್ಮಾಣ. ಈಗ ಪ್ರಜೆಗಳೇ ಪ್ರಭುಗಳು, ರಾಜರ ಆಳ್ವಿಕೆ ಇಲ್ಲ, ಹಾಗಾಗಿ ಪ್ರತಿ ಪ್ರಜೆಯೂ ಶ್ರೀರಾಮನಾಗಬೇಕು, ಸದ್ಗುಣಗಳ ಪ್ರತಿನಿಧಿಯಾದ ರಾಮನ ಗುಣಗಳನ್ನೇ ರೂಢಿಸಿಕೊಂಡಾಗ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಮಾತೃಭೂಮಿಯನ್ನು ಪ್ರೀತಿಸ ಬೇಕು, ಮಾತೃಭೂಮಿಯ ಮುಂದೆ ಸ್ವರ್ಗವೂ ತೃಣಸಮಾನವೆಂದ ಶ್ರೀರಾಮ ಎಲ್ಲರಿಗೂ ದೇಶಪ್ರೇಮದ ಸ್ಫೂರ್ತಿಯಾಗಿದ್ದಾನೆ. ಇದನ್ನು ಮೈಗೂಡಿಸಿಕೊಳ್ಳಬೇಕು ಎಂದರು.

Advertisement

ಅನಾಗರಿಕರನ್ನು ಮಟ್ಟಹಾಕಬೇಕು
ದೇಶದಲ್ಲಿ ಕೆಲವೇ ಅನಾಗರಿಕರು ಹಿಂಸೆ, ಕೊಲೆಯಲ್ಲಿ ತೊಡಗುವ ಮೂಲಕ ರಾಮರಾಜ್ಯಕ್ಕೆ ಭಂಗ ಬರುವಂತೆ ನಡೆದುಕೊಳ್ಳುತ್ತಿದ್ದಾರೆ, ಇದನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲೇಬೇಕು, ನಿಷ್ಪಕ್ಷಪಾತ ವಾಗಿ ಈ ಕೆಲಸವನ್ನು ಮಾಡಬೇಕು ಎಂದು ನುಡಿದರು.

ಇದಕ್ಕೆ ಮೊದಲು ನಡೆದ ತುಲಾ ಭಾರ ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾಲಯ ಮುಖ್ಯಸ್ಥ ಪ್ರೊ|ಎಂ.ಬಿ. ಪುರಾಣಿಕ್‌, ಕರ್ಣಾಟಕ ಬ್ಯಾಂಕ್‌ ಮಾಜಿ ಅಧ್ಯಕ್ಷ ಪಿ.ಜಯರಾಮ ಭಟ್‌, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಪ್ರದೀಪ್‌ ಕುಮಾರ್‌ ಕಲ್ಕೂರ, ಸುಧಾಕರ ರಾವ್‌ ಪೇಜಾವರ, ಶಕೀಲ ಕಾವ ಮುಂತಾದವರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next