Advertisement

ಪರರ ನೋವಿಗೆ ಸ್ಪಂದಿಸಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು

11:34 PM Sep 17, 2022 | Team Udayavani |

ಹುಬ್ಬಳ್ಳಿ: ಇಷ್ಟಾರ್ಥಗಳ ಈಡೇರಿಕೆ ಹಾಗೂ ದೇವರ ಅನು ಗ್ರಹಕ್ಕೆ ದಿನವಿಡೀ ಗುಡಿ ಸುತ್ತಿ ಪೂಜಿಸಿ ದರೆ ಸಾಲದು. ಪರರ ನೋವಿಗೆ ಸ್ಪಂದಿಸಿದರೆ ದೇವರ ಅನುಗ್ರಹ ಸಿಕ್ಕೀತು. ಇದರಿಂದ ಲೋಕ ಸುಭಿಕ್ಷ ವಾಗಲು ಸಾಧ್ಯ. ಅದಕ್ಕೆ ಭಗ ವತ್‌ ಪ್ರಜ್ಞೆ ಅವಶ್ಯವೆಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ನುಡಿದರು.

Advertisement

ಕೇಶ್ವಾಪುರದಲ್ಲಿ ಶನಿವಾರ ಆರಂಭವಾದ ಅ.ಭಾ. ಮಾಧ್ವ ಮಹಾ ಮಂಡಲದ 29ನೇಮಾಧ್ವ ತತ್ವಜ್ಞಾನ ಸಮ್ಮೇಳನ ಹಾಗೂ ಶ್ರೀಮನ್‌ನ್ಯಾಯಸುಧಾ ಮಂಗಲೋತ್ಸವದಲ್ಲಿ ಶ್ರೀಗಳು ಮಾತನಾಡಿ, ಬದುಕಿನಲ್ಲಿ ಬಯಸಿದ್ದನ್ನು ಪಡೆಯಲು ನಮ್ಮ ಪ್ರಯತ್ನ ಅಗತ್ಯ. ಹಾಗೆ ಪಡೆಯು ವಾಗ ಅದು ಇನ್ನೊಬ್ಬರ ದುಃಖ- ನೋವಿಗೆ ಕಾರಣವಾಗಬಾರದು. ನಮ್ಮ ಪ್ರಯತ್ನದ ಜತೆ ಭಗವಂತನ ಅನುಗ್ರಹ ಮುಖ್ಯ ಎಂದರು.

ಸಮಾಜ ಸಂಘಟಿತವಾಗಲಿ
ಸಾನ್ನಿಧ್ಯ ವಹಿಸಿದ್ದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಮಾತನಾಡಿ, ಮತಾಂತರದ ಮೂಲಕ ಕೆಲವರು ಹಿಂದೂ ಸಮಾಜ ವಿಘ ಟನೆಗೆ ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಕೆಲವು ಸಂಘಟನೆಗಳು ಮಾಧ್ವ ಮತ್ತು ಹಿಂದೂ ಸಮಾಜದ ಮಧ್ಯೆ ಭಿನ್ನಾಭಿ ಪ್ರಾಯ ಮೂಡಿಸಲು ಯತ್ನಿಸುತ್ತಿವೆ. ಇದರ ಬಗ್ಗೆ ಎಚ್ಚರವಿರಬೇಕು. ಯಾರಿಗೆ ಕಷ್ಟ ಎದುರಾದರೂ ಎಲ್ಲರೂ ಸಂಘಟಿತರಾಗಿ ಸಮುದಾಯದ ರಕ್ಷಣೆಗೆ ಮುಂದಾಗಬೇಕು. ಪೇಜಾವರ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದರು.

ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೆಶತೀರ್ಥ ಶ್ರೀಗಳು ಮಾತನಾಡಿ, ವೈದಿಕ ಕ್ಷೇತ್ರ ಸಮಾಜಮುಖಿ ಕಾರ್ಯ ಮಾಡುತ್ತಿದೆ. ವೇದವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ತತ್ವಜ್ಞಾನ ದರ್ಶನ ಸಾಧ್ಯ ಎಂದರು.

ಶಿರೂರು ಮಠದ ವೇದವರ್ಧನ ತೀರ್ಥರು ಮಾತನಾಡಿ, ರಾಜಕೀಯ ಸಮ್ಮೇಳನಗಳಿಗಿಂತ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇಂಥ ಕಾರ್ಯಕ್ರಮಗಳಿಗೆ ಜನರೇ ಸ್ವತಃ ಬರಬೇಕೇ ಹೊರತು ಯಾರೂ ಆಹ್ವಾನಿಸುವ ಅಗತ್ಯವಿಲ್ಲ ಎಂದು ಹೇಳಿದರು.

Advertisement

ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಗಳು ಮಾತನಾಡಿ, ಭಗವಂತ ಮಾತ್ರ ಎಲ್ಲರನ್ನೂ ರಕ್ಷಿಸಿ ಕಾಯುವ ವನು. ಅವನಿಲ್ಲದೆ ಜಗತ್ತಿಲ್ಲ. ಎಲ್ಲರ ಒಳಿತು ಬಯಸುವ ಅವನೇ ಸವೊìàತ್ತಮ ಎಂದರು.ಅದಮಾರು ಮಠದ ಈಶಪ್ರಿಯ ತೀರ್ಥರು, ಬನ್ನಂಜೆಯ ರಾಘವೇಂದ್ರ ತೀರ್ಥರು ಮಾತನಾಡಿ ದರು. ಸೇವಾಹಿ ಪರಮೋಧರ್ಮ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ಏಕಭಾವ ಅಗತ್ಯ: ಪ್ರೊ| ಎ. ಹರಿದಾಸ ಭಟ್ಟ
ಅಧ್ಯಕ್ಷತೆ ವಹಿಸಿದ್ದ ಪ್ರೊ| ಎ. ಹರಿದಾಸ ಭಟ್ಟ ಮಾತನಾಡಿ, ದೇಶದಲ್ಲಿ ಅವೈ ದಿಕ ದರ್ಶನಗಳು ಪ್ರಾಬಲ್ಯ ಮೆರೆದಾಗ ವೈದಿಕ ದರ್ಶನ ಪ್ರತಿಪಾದಿಸಿ ದವರು ಶ್ರೀ ಶಂಕರಾಚಾರ್ಯರು. ಆತ್ಮನೆಂಬ ಒಂದು ಸತ್ಯವಾದ ತತ್ವ ಇದೆ ಎಂದು ಸಾಧಿ ಸಿದರು. ಹರಿದಾಸ ಸಾಹಿತ್ಯ ಸಮಾಜಕ್ಕೆ ದೊರೆತ ದೊಡ್ಡ ಆಸ್ತಿ. ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಈ ತತ್ವಜ್ಞಾನ ಸಮ್ಮೇಳನ ಮಾಧ್ವ ಸಮಾಜದ ಸಂಭ್ರಮದ ಸಮಾವೇಶ. ಇಲ್ಲಿ ನಾವೆಲ್ಲ ಒಂದೇ ಸಮಾಜದ ಬಾಂಧ ವರು ಎಂಬ ಏಕಭಾವ ಮೂಡಬೇಕು. ಮಡಿವಂತಿಕೆಯಿಂದ ಹೊರ ಬರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next