Advertisement

ವಿಶ್ವ ಕರ್ಮರು ತಾಂತ್ರಿಕತೆಯ ಪಿತಾಮಹ: ಸಿ.ಟಿ. ರವಿ

07:54 PM Sep 18, 2020 | Suhan S |

ಚಿಕ್ಕಮಗಳೂರು: ವಿವಿಧ ಪಂಚ ಕಸುಬುಗಳಲ್ಲಿ ನೈಪುಣ್ಯತೆ ಹೊಂದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ವಿಶ್ವಕರ್ಮ ಗುರುಗಳು ತಾಂತ್ರಿಕತೆ ಪಿತಾಮಹ ಎನಿಸಿಕೊಳ್ಳುವ ಮೂಲಕ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಗುರುವಾರ ನಗರದ ಜಿಲ್ಲಾ ಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಗುರುಗಳ ಜಯಂತಿ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಕರ್ಮ ಗುರುಗಳು ತಾಂತ್ರಿಕತೆಯ ಪಿತಾಮಹ. ನಾಗರಿಕತೆಯು

ಪ್ರವರ್ಧಮಾನಕ್ಕೆ ಬರಲು ತಂತ್ರಜ್ಞಾನ ತುಂಬಾ ಪ್ರಾಮುಖ್ಯತೆ ಹೊಂದಿದ್ದು, ಚಿನ್ನ, ಬೆಳ್ಳಿ, ಮರಗೆಲಸ, ಕಬ್ಬಿಣ, ಎರಕದಂತಹ ಪಂಚ ಕಸುಬುಗಳಲ್ಲಿ ಕಲಾ ನೈಪುಣ್ಯತೆ ಹೊಂದಿ ತಾಂತ್ರಿಕತೆಯ ಪಿತಾಮಹ ಎನಿಸಿಕೊಳ್ಳುವ ಮೂಲಕ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಇತಿಹಾಸದ ಕಾಲಘಟ್ಟಗಳನ್ನು ಅಧ್ಯಯನ ಮಾಡಿದಲ್ಲಿ ದೇಶದಲ್ಲಿ ಶಾಸ್ತ್ರೋಕ್ತವಾಗಿ ನಿರ್ಮಿತಗೊಂಡಿರುವ ಬಹುತೇಕ ಪ್ರಸಿದ್ಧ ದೇವಾಲಯ ಬಾದಾಮಿ, ಹಂಪಿ, ಬೇಲೂರು, ಹಳೇಬೀಡು., ಅಜಂತಾ, ಎಲ್ಲೋರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪೂರ್ವಜರ ತಾಂತ್ರಿಕ ಕಲಾಪರಂಪರೆಯ ನೈಪುಣ್ಯತೆ ಕಂಡು ಬರುತ್ತದೆ. ಇದು ಅವರಲ್ಲಿನ ತಾಂತ್ರಿಕ ಕಲಾಸಕ್ತಿಯನ್ನು ತೋರುತ್ತದೆ ಎಂದರು.

ಪೂರ್ವಿಕರ ತಂತ್ರಜ್ಞಾನ ಪ್ರಾವೀಣ್ಯತೆಗೆ 2 ಸಾವಿರ ವರ್ಷಗಳ ಹಿಂದೆ ದೆಹಲಿಯಲ್ಲಿ ನಿರ್ಮಿತಗೊಂಡಿರುವ ಕಬ್ಬಿಣದ ಸ್ತಂಭ ಇಂದಿಗೂ ತುಕ್ಕು ಹಿಡಿಯದೇ ಇರುವುದು ತಾಂತ್ರಿಕತೆಗೆ ಸಾಕ್ಷಿಯಾಗಲಿದೆ. ವಿಶ್ವಕರ್ಮರು ಇಂತಹ ಕ್ಷೇತ್ರಗಳಲ್ಲಿ ಅಪಾರ ನೈಪುಣ್ಯತೆ ಹೊಂದಿ ಅದ್ವಿತೀಯ ಸಾಧನೆ ಮಾಡುವ ಮೂಲಕ ತಂತ್ರಜ್ಞಾನದ ಪಿತಾಮಹರೆನಿಸಿಕೊಂಡಿದ್ದಾರೆ. ಕೋವಿಡ್‌ -19 ಸಾಂಕ್ರಾಮಿಕ ರೋಗದ ಹಿನ್ನೆಲೆ ರಾಜ್ಯಾದ್ಯಂತ ವಿಶ್ವಕರ್ಮ ಜಯಂತಿಯನ್ನುಸರಳವಾಗಿ ಆಚರಿಸಲಾಗುತ್ತಿದ್ದು,  ಅವರ ತಾಂತ್ರಿಕ ಕಲಾ ಬದುಕು ಇಂದಿನ ಸಮಾಜಕ್ಕೆ ಮಾದರಿಯಾಗಲಿದೆ ಎಂದರು.

Advertisement

ವಿಶ್ವಕರ್ಮ ಸಮುದಾಯದ ಜಿಲ್ಲಾಧ್ಯಕ್ಷ ಮಹೇಶ್‌ ಮಾತನಾಡಿ, ಕೋವಿಡ್‌-19 ಹಿನ್ನೆಲೆ ವಿಶ್ವಕರ್ಮ ಸಮುದಾಯ ಆರ್ಥಿಕ ತೊಂದರೆಗೆ ಒಳಗಾಗಿದ್ದು, ವಿಶ್ವಕರ್ಮ ನಿಗಮದಿಂದ ಪಡೆದಿರುವ ಸಾಲದ ಕಂತನ್ನು ಕಟ್ಟಲು ಕಷ್ಟಕರವಾಗಿದ್ದುಸಾಲಮನ್ನಾ ಮಾಡುವಂತೆ ಸಚಿವರಲ್ಲಿ ಮನವಿ ಸಲ್ಲಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್‌, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ|ರಮೇಶ್‌, ವಿಶ್ವಕರ್ಮ ಸಮುದಾಯದ ಉಪಾಧ್ಯಕ್ಷ ರಾಮಪ್ಪಚಾರ್ಯ, ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌, ಖಜಾಂಚಿ ಚಂದ್ರಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next