Advertisement

ಕುಂದಾಪುರ ಭಾಷೆಯ ಅಧ್ಯಯನಕ್ಕೆ ಸಮಿತಿ ಸಾಧ್ಯತೆ: ಜಯಪ್ರಕಾಶ್‌ ಹೆಗ್ಡೆ

11:20 PM Jul 23, 2023 | Team Udayavani |

ಬೆಂಗಳೂರು: ಕುಂದಾಪುರ ಭಾಷೆ ಅಧ್ಯಯನ ಪೀಠಕ್ಕೆ ಸಂಬಂಧಿಸಿ ಮಂಗಳೂರು ವಿವಿಯಿಂದ ಪತ್ರ ರವಾನೆಯಾಗಿದ್ದು, ಸರಕಾರದ ಮಟ್ಟದಲ್ಲಿ ಬಾಕಿ ಉಳಿದುಕೊಂಡಿದೆ. ಮುಂದಿನ ಒಂದು ವಾರದಲ್ಲಿ ಕುಂದಾಪುರ ಭಾಷೆಯ ಅಧ್ಯಯನಕ್ಕೆ ಸಂಬಂಧಿಸಿ ಸಮಿತಿ ರಚನೆಯಾಗುವ ಸಾಧ್ಯತೆ ಇದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ತಿಳಿಸಿದರು.

Advertisement

ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿದ್ದ ವಿಶ್ವ ಕುಂದಾಪ್ರ ಕನ್ನಡ ಹಬ್ಬದ ಸಮಾರೋಪ ಸಮಾರಂಭದಲ್ಲಿ ರವಿವಾರ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಅರೆಭಾಷೆ ಹಾಗೂ ಕುಂದಾಪುರ ಭಾಷೆಯ ಅಧ್ಯಯನ ಪೀಠಕ್ಕೆ ಸಂಬಂಧಿಸಿ ಸಮಿತಿ ರಚನೆಯಾದ ಬಳಿಕ ಅಗತ್ಯವಿರುವ ಅನುದಾನ ಸಿಗುವ ಸಾಧ್ಯತೆಗಳಿವೆ. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದರು.

ಜಾತಿ ಪದ್ಧತಿ ನಾಶವಾಗದು
ಮೀಸಲಾತಿ ಎಲ್ಲರಿಗೂ ಸಿಗದ ಹೊರತು ಜಾತಿ ಪದ್ಧತಿ ನಾಶವಾಗುವುದಿಲ್ಲ. ಈಗ ಮೀಸಲಾತಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಮುಂದೆ ಎಲ್ಲಿ ಹೋಗಿ ತಲುಪುತ್ತದೆ ಎನ್ನುವುದು ಗೊತ್ತಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಮೀಸಲಾತಿ ವಿಚಾರದಿಂದ ದೂರವಿರಿಸಿ ಎಂದು ಮನವಿ ಮಾಡಿದರು.

ಮಂಗಳೂರು ವಿವಿ ಕುಂದಾಪುರ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೊಂಡಿದ್ದು, ಇದಕ್ಕೆ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡುವಂತೆ ಜಯಪ್ರಕಾಶ ಹೆಗ್ಡೆ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರೊ| ಎ.ವಿ. ನಾವಡ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಗೆ “ಊರಗೌರವ’ ನೀಡಿ ಗೌರವಿಸಲಾಯಿತು.

ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಪ್ರಮೋದ್‌ ಬಿ.ಶೆಟ್ಟಿ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಬಂಟರ ಸಂಘದ ಅಧ್ಯಕ್ಷ ಎಂ.ಮುರಳೀಧರ ಹೆಗ್ಡೆ ಉಪಸ್ಥಿತರಿದ್ದರು.

Advertisement

ಉದ್ಘಾಟನೆ ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದ ಸಾಧಕ ಶಾಂತಾರಾಮ ಶೆಟ್ಟಿ ಬಾಕೂìರು, ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಮೊದಲಾದವರು ಭಾಗವಹಿಸಿದ್ದರು.

ಶಿಕ್ಷಕರ ನೇಮಕಾತಿಗೆ ರಿಷಬ್‌ ಶೆಟ್ಟಿ ಮನವಿ
ಚಿತ್ರನಟ, ನಿದೇರ್ಶಕ ರಿಷಬ್‌ ಶೆಟ್ಟಿ ಮಾತನಾಡಿ, ಕುಂದಾಪುರ ಹಾಗೂ ಬೆಂಗ ಳೂರಿನ ನಡುವೆ ಉತ್ತಮ ನಂಟಿದೆ. ನಮಗೆ ಜೀವ ನೀಡಿದ್ದು ಕುಂದಾಪ್ರ, ಜೀವನ ಕೊಟ್ಟಿದ್ದು ಬೆಂಗಳೂರು. ಇಲ್ಲಿಗೆ ನಾವು ಬದುಕು ಕಟ್ಟಿಕೊಳ್ಳಲು ಬಂದಿದ್ದೇವೆ. ಆದರೂ ಭಾಷೆ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ. ಕುಂದಾಪುರ ಭಾಷೆಯಲ್ಲಿ ಮಾತನಾಡಿದರೆ ಕೊಚ್ಚಕ್ಕಿ ಅನ್ನಕ್ಕೆ ಮೀನ್‌ ಸಾರು ಹಾಕಿ ಊಟ ಮಾಡಿದಷ್ಟು ಸಂತೋಷ ಸಿಗುತ್ತದೆ. ಸರಕಾರಿ ಶಾಲೆ ಮೊದಲ ಪ್ರಾಮುಖ್ಯ ನೀಡಿ, ಅಗತ್ಯವಿರುವ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಮಾಧ್ಯಮದ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next