Advertisement

ದುಬೈನಲ್ಲಿ ವಿಶ್ವ ಕನ್ನಡ ಹಬ್ಬ: “ಭೂಮ್ತಾಯಿ’ಗಾಯನ

03:23 PM Nov 16, 2022 | Team Udayavani |

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಮೂಲದ ಡಿ.ಆರ್‌. ನಿರ್ಮಲಾ ಅವರು ತಮ್ಮ ಭೂಮ್ತಾಯಿ ಬಳಗದ ತಂಡದೊಂದಿಗೆ ನ.19 ರಂದು ದುಬೈನಲ್ಲಿ ನಡೆಯಲಿರುವ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ತಮ್ಮ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.

Advertisement

ಕರ್ನಾಟಕ ಪ್ರಸ್‌ ಕ್ಲಬ್‌ ಕೌನ್ಸಿಲ್‌ ವಿಶ್ವ ಕನ್ನಡ ಹಬ್ಬ ಈ ಬಗ್ಗೆ ಆದೇಶ ಪತ್ರ ನೀಡಿದ್ದು, ಡಿ.ಆರ್‌. ನಿರ್ಮಲಾ ಅವರನ್ನು ಆಯ್ಕೆ ಮಾಡುವುದ ರೊಂದಿಗೆ ಜಾನಪದ ಸಂಗೀತ ಕಾರ್ಯಕ್ರಮದ ಮೇಲ್ವಿಚಾರಕರಾಗಿಯೂ ಆಯ್ಕೆ ಮಾಡಲಾಗಿದೆ.

ನಿರ್ಮಲಾ ಅವರು ದೊಡ್ಡಬಳ್ಳಾ ಪುರದ ಮಾರುಕಟ್ಟೆ ಚೌಕದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ದೇಶಭಕ್ತಿ ಗೀತೆ, ಭಾವಗೀತೆ ಹಾಡುವ ಮೂಲಕ ಗಾಯ ನದಲ್ಲಿ ಆಸಕ್ತಿ ಬೆಳೆಸಿಕೊಂಡರು. ನಂತರ ಪ್ರೌಢಶಾಲೆಯಲ್ಲಿ ಗಂಗಮ್ಮನ ಒಕ್ಕಲು ತಂಡ ಗಾಯನ ಕಾರ್ಯಕ್ರಮ ಆಯೋ ಜನೆ ಮಾಡುತ್ತಿದ್ದರು. ಪರಿಸರ ಜಾಗೃತಿ ಗೀತೆಗಳ ತಂಡವನ್ನು ಸೇರಿದ ನಿರ್ಮಲಾ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ.

ನಂತರ ಭೂಮ್ತಾಯಿ ಬಳಗ ತಂಡ ಕಟ್ಟಿಕೊಂಡು ಇಡೀ ರಾಜ್ಯಾದ್ಯಂತ ಸಂಚ ರಿಸಿ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ಜಾನಪದ ಹಾಗೂ ನೀರಿನ ರಕ್ಷಣೆ, ಸಾಂಕ್ರಾಮಿಕ ರೋಗಗಳ ತಡೆಗಟ್ಟುವುದು ಮೊದಲಾದ ಜಾಗೃತಿ ಗೀತೆ ಈ ತಂಡದಿಂದ ಹೆಚ್ಚಾಗಿ ಮೂಡಿ ಬರು ವುದು ವಿಶೇಷ. ಕರ್ನಾಟಕ ಜಾನ ಪದ ಅಕಾಡೆಮಿಯ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಕಲರ್ ಕನ್ನಡದ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಉತ್ಛ ಸ್ಥಾಯಿಯಲ್ಲಿ ಹಾಡುವ ಮೂಲಕ ತಮ್ಮದೇ ಆದ ವರ್ಚ ಸ್ಸು ಗಳಿಸಿರುವ ನಿರ್ಮಲಾ ಅವರ ಇದೇ ಮೊದಲ ಬಾರಿ ವಿದೇಶಿ ನೆಲದಲ್ಲಿ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ತಮ್ಮ ಗಾಯನ ಕಾರ್ಯಕ್ರಮ ನೀಡ ಲಿದ್ದು, ದೊಡ್ಡಬಳ್ಳಾ ಪುರದ ಕಲಾಭಿಮಾನಿಗಳು ಶುಭ ಹಾರೈಸಿದ್ದಾರೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next