Advertisement

ಪೊಲೀಸರ ಕ್ರಮಕ್ಕೆ ವಿಶ್ವ ಹಿಂದೂ ಪರಿಷತ್‌ ಖಂಡನೆ

10:45 AM Nov 03, 2017 | Team Udayavani |

ಶಹಾಬಾದ: ಜೇವರ್ಗಿ ತಾಲೂಕಿನ ಆಂದೋಲಾದ ಕರುಣೇಶ್ವರ ಮಠದ ಪೂಜ್ಯರಾದ ಸಿದ್ದಲಿಂಗ ಶಿವಾಚಾರ್ಯರನ್ನು ಬಂಧಿಸಿದ ಪೊಲೀಸರ ಕ್ರಮ ವಿರೋಧಿಸಿ ನಗರದ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಪ್ರತಿಭಟನೆ ನಡೆಸಿದ ಉಪ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ವಿಎಚ್‌ಪಿ ಗೌರವ ಅಧ್ಯಕ್ಷ ನಾಗರಾಜ ಮೇಲಗಿರಿ, ಅಧ್ಯಕ್ಷ ಚಂದ್ರಕಾಂತ ಗೊಬ್ಬುರಕರ್‌, ಪ್ರಧಾನ ಕಾರ್ಯದರ್ಶಿ ರಾಮು ಕುಸಾಳೆ ನೇತೃತ್ವದಲ್ಲಿ ಕಾರ್ಯಕರ್ತರು ಶ್ರೀರಾಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಶೀಲ್ದಾರ್‌ ಕಚೇರಿಗೆ ತಲುಪಿದರು.

Advertisement

ಅಂದೋಲಾ ಕರುಣೇಶ್ವರ ಮಠವು ಪುರಾತನ ಮಠವಾಗಿದೆ. ರಾಜಕೀಯ ಪ್ರೇರಿತವಾಗಿ, ಹಿಂದು ಧರ್ಮದ ಆಂದೋಲಾ ಸ್ರಿàಗಳ ತೇಜೋವಧೆಗಾಗಿ ಅ. 30 ರಂದು ಅವರನ್ನು ಬಂಧಿಸಲಾದ ಕ್ರಮ ಖಂಡನೀಯವಾದದ್ದು. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗಳಗೆ, ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆ ಅವರಿಗೆ ನೀಡಲಾಯಿತು. 

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಸುಭಾಷ ಜಾಪೂರ, ಕಾರ್ಮಿಕ ಮುಖಂಡ ಭೀಮರಾವ ಸಾಳೊಂಕೆ, ವಿರೇಶ ಬಂದಳ್ಳಿ, ಅರುಣಕುಮಾರ ಪಟ್ಟಣಕರ್‌, ಬಸವರಾಜ ಬಿರಾದಾರ, ಸಂಜಯ ಸೂಡಿ, ವಿಠಲ ಆನಚನಲ್‌, ಸಂತೋಷ ಪುಲಸೆ, ಅಂಬರೀಷ ಪುಲಸೆ, ಮಂಜುನಾಥ, ಶಿವಕುಮಾರ ತಳವಾರ, ವಿಶ್ವರಾಧ್ಯ ಸ್ವಾಮಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next