Advertisement

ಇಂದು ವಿಷ್ಣುವರ್ಧನ್‌ ಹುಟ್ಟುಹಬ್ಬ: ಅಭಿಮಾನಿಗಳಿಂದ ಹಲವು ಕಾರ್ಯಕ್ರಮ

11:27 AM Sep 18, 2022 | Team Udayavani |

ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ ಅವರ 72ನೇ ಹುಟ್ಟುಹಬ್ಬ. ವಿಷ್ಣುವರ್ಧನ್‌ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಅಪರೂಪದ ಚಿತ್ರಗಳ ಮೂಲಕ ಅವರು ಸದಾ ನಮ್ಮೊಂದಿಗಿದ್ದಾರೆ. ಆ ಖುಷಿಯಲ್ಲೇ ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಹುಟ್ಟುಹಬ್ಬದ ದಿನದಂದು ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರನ್ನು ಆರಾಧಿಸುತ್ತಾರೆ.

Advertisement

ವಿಷ್ಣುವರ್ಧನ್‌ ಅವರು ತಮ್ಮದೇ ನಟನಾ ಶೈಲಿ ಮೂಲಕ ಎಲ್ಲರ ಮನಸ್ಸಲ್ಲೂ ಮನೆ ಮಾಡಿದ್ದಾರೆ. ಎಲ್ಲಾ ತರಹದ ಪಾತ್ರಗಳಲ್ಲೂ ಸೈ ಎನಿಸಿಕೊಂಡು ಅಭಿಮಾನಿಗಳ ಪಾಲಿನ ಪ್ರೀತಿಯ ಹೀರೋ ಎನಿಸಿಕೊಂಡಿದ್ದಾರೆ. ಅವರಿಲ್ಲದ 13 ವರ್ಷಗಳು ಕಳೆದುಹೋಗಿವೆ. ಅವರಿಲ್ಲ ಎಂಬ ಭಾವನೆಯನ್ನು ಪಕ್ಕಕ್ಕಿಟ್ಟು ಕಳೆದ ಒಂದು ದಶಕದಿಂದಲೂ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಮಿಂದೇಳುತ್ತಿದ್ದಾರೆ.

ಇದನ್ನೂ ಓದಿ:ಶಮಿಗೆ ಕೋವಿಡ್ ಪಾಸಿಟಿವ್; ಎರಡು ವರ್ಷದ ಬಳಿಕ ತಂಡ ಸೇರಿದ ಮತ್ತೋರ್ವ ಅನುಭವಿ ವೇಗಿ

ಇಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ನಾನಾ ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸಲು ಸಿದ್ಧರಾಗಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿಗೆ ತೆರಳಿ ಪೂಜೆ ಸಲ್ಲಿಸಿ, ಹಲವು ಸಾಮಾಜಿಕ ಕಾರ್ಯಕ್ರಮ ನಡೆಸಲಿದ್ದಾರೆ ಅಭಿಮಾನಿಗಳು. ಇನ್ನು, ವಿಷ್ಣು ಸೇನಾ ಸಮಿತಿ ಹಾಗೂ ಹಲವು ಸಂಘ ಸಂಸ್ಥೆಗಳು ಸೇರಿಕೊಂಡು ಒಂದೇ ಜಾಗದಲ್ಲಿ ಐವತ್ತು ಕಟೌಟ್‌ ಹಾಕಲಿದ್ದಾರೆ. ವಿಷ್ಣುವರ್ಧನ್‌ ಅವರ ಯಶಸ್ವಿ ಚಿತ್ರಗಳ ಕಟೌಟ್‌ ನಿಲ್ಲಿಸಿ ದಾಖಲೆ ಬರೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next