Advertisement
ಇದು ನವ ಮನ್ವಂತರದ ಕಾಲ. ಹಬ್ಬದ ಸಡಗರದ ಜತೆಗೆ ಜನರ ಮನದಲ್ಲಿ ಹೊಸ ಕನಸುಗಳು ಚಿಗುರುವ, ಭರವಸೆ, ಆಶಯ, ಬಯಕೆ ಕವಲೊಡೆಯುವ ಸಮಯ. ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಬಾಂಧವ್ಯ, ಗೌರವ ಮನೋಭಾವ ವೃದ್ಧಿಸಲಿ. ಜೀವನದಲ್ಲಿ ಏನೇ ಏರುಪೇರುಗಳು ಸಂಭವಿಸಿದರೂ ಸರ್ವರೂ ಸಮನ್ವಯ ದಿಂದ ಒಟ್ಟಾಗಿ ಬಾಳಬೇಕೆನ್ನುವುದು ಈ ದಿನದ ಸಂಕಲ್ಪ.
ವಿಷುವಿನ ಮುನ್ನಾದಿನವೇ ಕಣಿ ಇಡಲು ಬೇಕಾಗುವ ಸಾಮಗ್ರಿಗಳನ್ನು ಮನೆಯ ಮಹಿಳೆಯರು ಜೋಡಿಸಿಡುತ್ತಾರೆ. ಮನೆಯವರೆಲ್ಲ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ದೇವರ ಕೋಣೆಯಲ್ಲಿ ಇರಿಸಿದ ಕಣಿಯನ್ನು ನೋಡುವುದು ಒಂದು ವಿಶಿಷ್ಟ ಮತ್ತು ಅಪೂರ್ವ ಕ್ಷಣ. ಕಣಿ ಕಂಡ ತತ್‌ಕ್ಷಣ ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿ ಕೊಳ್ಳಬೇಕು ಎಂಬ ಹೇಳಿಕೆ ಯೊಂದಿದೆ. ಇದರಿಂದ ಆಯಸ್ಸು, ಆರೋಗ್ಯ, ಐಶ್ವರ್ಯಗಳ ಸಮೃದ್ಧಿ ಯಾಗುವುದು ಎಂಬ ಆಶಯ.
Related Articles
Advertisement
ಕೊನ್ನೆ ಹೂವಿಗೆ ವಿಶೇಷ ಸ್ಥಾನ ಕೇರಳದಲ್ಲಿ ಕಣಿ ಇಡಲು ಕೊನ್ನೆ ಹೂವು ಬೇಕೇಬೇಕು. ಅಲ್ಲಿನ ರಾಜ್ಯ ಪುಷ್ಪ ಎಂದು ಗುರುತಿಸಲಾದ ಕರ್ಣಿಕಾರ (ಕೊನ್ನೆ ಹೂ) ಹೊಂಬಣ್ಣದಿಂದ ಕಂಗೊಳಿ ಸುವುದರಿಂದ ಅದರಂತೆ ಸಂಪತ್ತು ಸಮೃದ್ಧಿಯಾಗಲಿ ಎಂಬುದು ಅವರ ನಂಬಿಕೆ. ಈ ದಿನ ತಮ್ಮ ಹಿತ್ತಲಲ್ಲಿ ಬೆಳೆದ ತರಕಾರಿ ಗಳನ್ನೋ, ಇನ್ನಿತರ ವಸ್ತು ಗಳನ್ನೋ ಊರಿನ ಮುಖ್ಯಸ್ಥರ, ಧಣಿಗಳ ಮನೆಗೆ, ಊರಿನ ಪ್ರಮುಖ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿ “ಬಿಸುಕಾಣಿಕೆ’ ನೀಡುವ ಕ್ರಮ ಕೂಡ ಕೆಲವೆಡೆ ಆಚರಣೆಯಲ್ಲಿದೆ. ಅಂದು ವಿಶೇಷವಾಗಿ ಹಲಸಿನ ಕಾಯಿ, ಹಣ್ಣು, ಮಾವಿನ ಹಣ್ಣು ಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಖಾದ್ಯ, ಎಳೆಗೇರು ಬೀಜದ ಪಾಯಸ, ಉದ್ದು, ಅಕ್ಕಿ ಬಳಸಿ ವಿವಿಧ ರೀತಿಯ ಕಡುಬುಗಳನ್ನು ತಯಾರಿಸುತ್ತಾರೆ. “ಕಣಿ’ ಎಂದರೇನು
ದೇವರ ಕೋಣೆಯಲ್ಲಿ ದೀಪ ಬೆಳಗಿಸಿ, ರಂಗೋಲಿ ಹಾಕಿ, ತೆಂಗಿನಕಾಯಿ, ಅಕ್ಕಿ, ಅಡಿಕೆ, ವೀಳ್ಯದೆಲೆ, ಕಲಶ, ಕನ್ನಡಿ, ಭತ್ತ, ಅರಶಿನ ಕುಂಕುಮ, ನವ ಧಾನ್ಯಗಳು, ಬಂಗಾರದ ಆಭರಣ, ಕನ್ನಡಿ, ಹೂಮಾಲೆ, ವಿವಿಧ ರೀತಿಯ ಹಣ್ಣುಹಂಪಲು, ತರಕಾರಿಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಜೋಡಿಸಿ ಇಡುವುದನ್ನು ಕಣಿ ಎನ್ನುವರು. ಕೃಷಿ ಚಟುವಟಿಕೆಗಳಿಗೆ ಚಾಲನೆ
ವಿಷು ಹಬ್ಬದಂದು ತುಳುನಾಡಿನಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುತ್ತಾರೆ. ಗದ್ದೆ ಉಳು ವುದು, ಬೀಜ ಬಿತ್ತುವುದು ಇತ್ಯಾದಿ ಕೆಲಸ ಕಾರ್ಯಗಳಿಗೆ ಅಂದು ಮುಹೂರ್ತ ನೆರವೇರಿಸಲಾಗುತ್ತದೆ. ಕೇರಳದಲ್ಲಿ ಈ ದಿನವನ್ನು ವಾರ್ಷಿಕೋತ್ಸವ (ಕೃಷಿ ಉತ್ಸವ) ಎಂದೇ ಆಚರಿಸಲಾಗು¤ತದೆ. – ಗಣೇಶ್ ಕುಳಮರ್ವ