ಹೊಸದಿಲ್ಲಿ: ಆಂಧ್ರ ಪ್ರದೇಶಕ್ಕೆ ನೂತನ ರಾಜಧಾನಿಯ ಘೋಷಣೆಯಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಇಂದು ಕರಾವಳಿ ನಗರ ವಿಶಾಖಪಟ್ಟಣಂ ಇನ್ನು ಆಂಧ್ರ ಪ್ರದೇಶದ ರಾಜಧಾನಿಯಾಗಿರಲಿದೆ ಎಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಮೈತ್ರಿಕೂಟದಲ್ಲಿ ಮಾತನಾಡಿದ ಸಿಎಂ ಜಗನ್ ಈ ಘೋಷಣೆ ಮಾಡಿದ್ದಾರೆ. “ನಮ್ಮ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಇಲ್ಲಿದ್ದೇನೆ. ನಾನು ಕೂಡ ವೈಜಾಗ್ ಗೆ ಶಿಫ್ಟ್ ಆಗುತ್ತೇನೆ” ಎಂದು ಸಿಎಂ ಹೇಳಿದರು.
“ಆಂಧ್ರ ಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೀವೇ ನೋಡಲು ನಾನು ಮತ್ತು ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತೇನೆ” ಎಂದು ಅವರು ಹೇಳಿದರು.
2014 ರಲ್ಲಿ ಆಂಧ್ರ ಪ್ರದೇಶ ರಾಜ್ಯವನ್ನು ವಿಭಜಿಸಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲಾಗಿತ್ತು. ಈ ವೇಳೆ ರಾಜಧಾನಿ ಹೈದರಾಬಾದ್ ತೆಲಂಗಾಣದ ಪಾಲಾಗಿತ್ತು. ಈ ವೇಳೆ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು 2015 ರಲ್ಲಿ ಅಮರಾವತಿಯನ್ನು ಆಂಧ್ರ ಪ್ರದೇಶವನ್ನು ರಾಜಧಾನಿಯಾಗಿ ಘೋಷಿಸಿತ್ತು. ಇದಕ್ಕಾಗಿ ರೈತರಿಂದ 33,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು.
Related Articles
ಇದನ್ನೂ ಓದಿ:ಪಾಕಿಸ್ಥಾನ ತಂಡಕ್ಕೆ ಆನ್ ಲೈನ್ ಕೋಚ್? ಏನಿದು ವಿಚಿತ್ರ ನಿರ್ಧಾರ?
ಜಗನ್ ಮೋಹನ್ ರೆಡ್ಡಿ ಅವರು 2019 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ರಾಜ್ಯ ಸರ್ಕಾರವು ಮೂರು ರಾಜಧಾನಿಗಳನ್ನು ಹೊಂದುವ ಕಲ್ಪನೆಯನ್ನು ಹರಿಬಿಟ್ಟಿತ್ತು. ವಿಶಾಖಪಟ್ಟಣಂ-ಕಾರ್ಯನಿರ್ವಾಹಕ ರಾಜಧಾನಿ, ಅಮರಾವತಿ-ಶಾಸಕ ರಾಜಧಾನಿ ಮತ್ತು ಕರ್ನೂಲ್-ನ್ಯಾಯಾಂಗ ರಾಜಧಾನಿ ಎಂಬ ಯೋಜನೆ ಆರಂಭಿಸಿತ್ತು.
ಕಳೆದ ವರ್ಷ ಮಾರ್ಚ್ ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಮೂರು ರಾಜಧಾನಿ ಯೋಜನೆಯ ವಿರುದ್ಧ ತೀರ್ಪು ನೀಡಿತು. ಅಮರಾವತಿಯನ್ನು ರಾಜ್ಯದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿತು.
2022 ಮಾರ್ಚ್ 3ರಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ರಾಜಧಾನಿಯನ್ನು ಸ್ಥಳಾಂತರಿಸಲು, ವಿಭಜಿಸಲು ಅಥವಾ ತ್ರಿವಿಭಜಿಸಲು ಯಾವುದೇ ಶಾಸನವನ್ನು ಮಾಡುವ ಸಾಮರ್ಥ್ಯವನ್ನು ರಾಜ್ಯ ಶಾಸಕಾಂಗವು ಹೊಂದಿಲ್ಲ ಎಂದು ಹೇಳಿದೆ.