Advertisement

ಮೆಣಸಿನಕಾಯಿ ರೋಗದಿಂದ ರೈತ ಕಂಗಾಲು: ಔಷಧಿ ಸಿಂಪಡಿಸಿ ರೋಗ ಹತೋಟಿಗೆ ತರಲು ಯತ

12:53 PM Oct 04, 2020 | sudhir |

ಶಿರೂರ: ಶಿರೂರ, ಬೆನಕಟ್ಟಿ ಸೇರಿದಂತೆ ಈ ಭಾಗದ ಗ್ರಾಮಗಳಲ್ಲಿ ಬೆಳೆದ ಮೆಣಸಿನಕಾಯಿ ಬೆಳೆ ಸತತ ಮಳೆ ಹಾಗೂ ಹವಾಮಾನದ ವೈಪರೀತ್ವಕ್ಕೆ ಸಿಲುಕಿ ಮುಟ್ಟರೋಗ ಕೀಟದ ಬಾಧೆಗೆ ನರಳುತ್ತಿದೆ. ಬ್ಯಾಡಗಿ, ಡಬ್ಬಗಾಯಿ, ಗುಂಟೂರು ತಳಿಗಳನ್ನು ಶೇ. 40 ರೈತರು ಬೆಳೆದಿದ್ದು ಮುಟ್ಟರೋಗ ಬಂದು ಬೆಳೆಗಳು ಕಮರಿ ಹೋಗುತ್ತಿವೆ. ಕೃಷಿ ಇಲಾಖೆ ಆಧಿಕಾರಿಗಳ ಸಲಹೆಯಂತೆ ಕ್ರಿಮಿನಾಶಕ ಸಿಂಪಡಿಸಿ ಕೀಟ ಹಾಗೂ ರೋಗ ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ. ಕೆಲವರು ರೋಗ ಗಿಡಗಳನ್ನು ಕಿತ್ತು ಹಾಕುತ್ತಿದ್ದಾರೆ.

Advertisement

ಈ ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಪರ್ಯಾಯ ಬೆಳೆಯಾಗಿ ಮೆಣಸಿನಕಾಯಿ ಬೆಳೆದಿದ್ದಾರೆ. ಸೂಕ್ತ ಮಾಹಿತಿ ದೊರಕದೆ ಇಳುವರಿ ಕಡಿಮೆಯಾಗುತ್ತಿದೆ.

ನಿರಂತರ ಮಳೆ: ಈರುಳ್ಳಿ ಬೆಳೆಗೆ ರೋಗ ಬಾಧೆ
ಬಾಗಲಕೋಟೆ: ತಾಲೂಕಿನ 6300 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದ್ದು, ಶೇ. 90 ಬೆಳೆ ನಷ್ಟವಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುಭಾಸ ಸುಲ್ಫಿ ತಿಳಿಸಿದ್ದಾರೆ. ಜುಲೈ, ಆಗಸ್ಟ್‌ ಹಾಗೂ ಸೆ‌ಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ರೋಗ ಬಾಧಿಸಿದೆ. ತಾಲೂಕಿನಲ್ಲಿ ಬಿತ್ತನೆಯಾದ ಅಂದಾಜು 6300 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆಯಲ್ಲಿ ಶೇ. 90 ಬೆಳೆ ಹಾನಿಗೊಳಗಾಗಿದೆ. ರೋಗ ಬಾಧೆಯಿಂದ ಹಾನಿಗೊಳಗಾದ ಸದರಿ ಪ್ರದೇಶವನ್ನು ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅ ಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸಿದೆ. ಈಗಾಗಲೇ ಜುಲೈ ಹಂತದ ಸಮೀಕ್ಷೆಯು ಮುಕ್ತಾಯ ಹಂತದಲ್ಲಿದೆ. ಈರುಳ್ಳಿ ಬೆಳೆ ಹಾನಿಯಾದ ರೈತರು ಸಂಬಂಧಿ ಸಿದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಹೋಬಳಿ ಮಟ್ಟದ ಸಹಾಯಕ ತೋಟಗಾಟರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ :ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಡಿ.ಕೆ. ರವಿ ಪತ್ನಿ ಕುಸುಮಾ

ಹೆಚ್ಚಿನ ಮಾಹಿತಿಗೆ

Advertisement

ಬಾಗಲಕೋಟೆ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ: 9845729261,

ಕಲಾದಗಿ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ: 9986929882,
ರಾಂಪುರ ಸಹಾಯಕ ತೋಟಗಾಟರಿಕೆ ಅಧಿಕಾರಿ ಮೊ: 8217295283 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next