Advertisement

ವರ್ಚುಯಲ್ ವರ್ಸಸ್ ಫಿಸಿಕಲ್: ಚರ್ಚೆ ಹುಟ್ಟುಹಾಕಿದ ಪಣಜಿ ಚಿತ್ರೋತ್ಸವ

12:39 PM Jan 22, 2021 | Team Udayavani |

ಪಣಜಿ: ವರ್ಚುಯಲ್ ವರ್ಸಸ್ ರಿಯಲ್ ಅಥವಾ ಫಿಸಿಕಲ್! ಈ ಚರ್ಚೆ ಆರಂಭವಾಗಿರುವುದು ಗೋವಾ ಚಿತ್ರೋತ್ಸವದಲ್ಲಿ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಚಿತ್ರೋತ್ಸವಕ್ಕೆ ಹೈಬ್ರಿಡ್ ರೂಪ ನೀಡಲಾಗಿದೆ. ಚಿತ್ರ ರಸಿಕರೂ ವರ್ಚುಯಲ್ ಮತ್ತು ಫಿಸಿಕಲ್ ರೂಪದಲ್ಲಿ ನೋಂದಣಿ ಮಾಡಲು ಅವಕಾಶವಿತ್ತು. ಅದರಂತೆಯೇ ಎರಡು ಸಾವಿರಕ್ಕೂ ಹೆಚ್ಚು ಮಂದಿ ಫಿಸಿಕಲ್ ಚಿತ್ರೋತ್ಸವಕ್ಕೆ ಸುಮಾರು ಒಂದರಿಂದ ಒಂದೂವರೆ ಸಾವಿರ (ಅಧಿಕೃತ ಮಾಹಿತಿ ಲಭ್ಯವಾಗಿಲ್ಲ) ಮಂದಿ ನೋಂದಣಿ ಮಾಡಿಸಿದ್ದಾರೆ. ಒಟ್ಟೂ ಚಿತ್ರೋತ್ಸವ ಐದು ಸಾವಿರ ಮಂದಿಗೆ ತಲುಪಿರಬಹುದು ಎಂದು ಅಂದಾಜಿಸಲಾಗುತ್ತಿದೆ.

Advertisement

ಹೈಬ್ರಿಡ್ ರೂಪ

ವರ್ಚುಯಲ್ ಹಾಗೂ ಫಿಸಿಕಲ್ ಎನ್ನುವ ನೆಲೆಯಲ್ಲಿ ಚಿತ್ರೋತ್ಸವವನ್ನು ಹೈಬ್ರಿಡ್ ರೂಪದಲ್ಲಿ ಯೋಜಿಸಲಾಗಿದೆ. ಆದರೆ ಚಿತ್ರೋತ್ಸವದಲ್ಲಿ ಭಾಗವಹಿಸಿದ ಹಲವಾರು ಚಿತ್ರ ರಸಿಕರು, ಬೌದ್ದಿಕ ಆಯಾಮಗಳಿರುವ ಯಾವುದೇ ಉತ್ಸವಗಳು ಈ ರೀತಿ ನಡೆದರೆ ಉದ್ದೇಶ ಈಡೇರದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಕೊರೊನಾ ಕಾರಣದಿಂದ ಈ ಉತ್ಸವದ ರೀತಿಯನ್ನು ಅನಿವಾರ್ಯವಾಗಿ ಒಪ್ಪಬಹುದು. ಆದರೆ ಇದೇ ಮಾದರಿಯ ಉತ್ಸವ ಮುಂದುವರಿದರೆ ಕಷ್ಟ ಎನ್ನುತ್ತಾರೆ ಮುಂಬಯಿಯಿಂದ ಬಂದಿರುವ ಚಿತ್ರ ರಸಿಕರೊಬ್ಬರು.

Advertisement

ಇದೇ ಅಭಿಪ್ರಾಯವನ್ನು ಕೇರಳದ ಚಿತ್ರ ರಸಿಕರೊಬ್ಬರು ವ್ಯಕ್ತಪಡಿಸುತ್ತಾರೆ. ಈ ಚಿತ್ರೋತ್ಸವವನ್ಬು ಈ ವರ್ಷ ನಿಲ್ಲಿಸಬಾರದೆಂಬ ಕಾರಣಕ್ಕೆ ನಡೆಸಿರುವುದು ಸರಿ. ಆದರೆ, ಇದೇ ಮಾದರಿ ಮುಂದುವರಿಯುವುದು ಕಷ್ಟ.

ಇದನ್ನೂ ಓದಿ:ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

ವರ್ಚುಯಲ್ ಮಾದರಿ ಹಲವರಿಗೆ ಇಷ್ಟವಾಗಿಲ್ಲ. ಜತೆಗೆ ಚಿತ್ರೋತ್ಸವದಲ್ಲಿ ಕನಿಷ್ಟ ಮಾಹಿತಿಗೂ ಆನ್ ಲೈನ್ ಅವಲಂಬಿಕೆಗೂ ಬೇಸರ ವ್ಯಕ್ತವಾಗಿದೆ. ಚಿತ್ರದ ಮಾಹಿತಿ, ವೇಳಾಪಟ್ಟಿ ಎಲ್ಲವೂ ಆನ್ ಲೈನ್ ಮೂಲಕವೇ ಪಡೆಯಬೇಕಿದೆ. ಕೆಟಲಾಗ್ ಸಹ ಪುಸ್ತಕ ರೂಪದಲ್ಲಿ ಲಭ್ಯವಾಗುತ್ತಿಲ್ಲ.

ವರ್ಚುಯಲ್ ಕಷ್ಟವೇಕೆ?

ಒಂದು ಸಿನಿಮಾ ನಾವು ಆನ್ ಲೈನ್ ನಲ್ಲಿ ಯಾವುದೇ ಅಡಚಣೆ ಇಲ್ಲದೇ ನೋಡಬೇಕಾದರೆ ಕನಿಷ್ಟ 25 ಎಂಬಿ ವೇಗದ ಇಂಟರ್ ನೆಟ್ ಸೌಲಭ್ಯ ಹೊಂದಿರಬೇಕು. ಇದು ಎಲ್ಲರಿಗೂ ಕಷ್ಟ. ಹಾಗಾಗಿ ಬಹಳ ಜನರಿಗೆ ತಲುಪುವುದೂ ಕಷ್ಟ ಎಂಬುದು ಹಲವರ ಅನಿಸಿಕೆ.

ವರ್ಚುಯಲ್ ಅಥವಾ ರಿಯಲ್ ಎಂಬ ಗೊಂದಲದಲ್ಲಿ ಈ ಚಿತ್ರೋತ್ಸವ ಮುಗಿಯುವ ಹಂತಕ್ಕೆ ಬಂದಿದೆ. ಆದರೆ, ಒಂದಂತೂ ಖಚಿತ. ಇದರಲ್ಲಿನ ಅನುಭವ ಮುಂದಿನ ಬೇರೆ ಬೇರೆ ಚಿತ್ರೋತ್ಸವಗಳ ರೂಪವನ್ನು ನಿರ್ಧರಿಸುವ ಸಾಧ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next