Advertisement

UdupI: ವರ್ಚುವಲ್‌ ಅರೆಸ್ಟ್‌: 89 ಲ.ರೂ.ವಂಚನೆ

08:09 PM Sep 14, 2024 | Team Udayavani |

ಉಡುಪಿ: ನಿಮ್ಮ ಮೇಲೆ ವರ್ಚುವಲ್‌ ಅರೆಸ್ಟ್‌ ವಾರಂಟ್‌ ಜಾರಿಯಾಗಿದೆ ಎಂದು ವೀಡಿಯೋ ಕಾಲ್‌ ಮೂಲಕ ಬೆದರಿಸಿ ಲಕ್ಷಾಂತರ ರೂ.ಆನ್‌ಲೈನ್‌ ಮೂಲಕ ವಂಚನೆ ಎಸಗಿದ ಘಟನೆ ನಡೆದಿದೆ.

Advertisement

ಉಡುಪಿ ನಗರದ ನಿವಾಸಿ ಸಂತೋಷ್‌ ಕುಮಾರ್‌ ವಂಚನೆಗೊಳಗಾದವರು. ಸೆ. 11ರಂದು +918822309328 ಸಂಖ್ಯೆಯಿಂದ ಅಪರಿಚಿತರು ಕರೆಮಾಡಿ Telecom Regulatory Authority of India ದಿಂದ ಕರೆ ಮಾಡುತ್ತಿದ್ದು, ನಿಮ್ಮ ಮೊಬೈಲ್‌ ನಂಬರ್‌ನಲ್ಲಿ ಅನೈತಿಕ ಜಾಹೀರಾತು ಹಾಗೂ ಕಿರುಕುಳ ನೀಡುವಂತಹ ಸಂದೇಶಗಳು ಇದ್ದು, ನಿಮ್ಮ ಮೇಲೆ ಒಟ್ಟು 17 ಎಫ್ಐಆರ್‌ ದಾಖಲಾಗಿವೆ. 2 ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲ ಕಾಂಟಾಕ್ಟ್ ಸಂಖ್ಯೆಯನ್ನು ನಿಷ್ಕ್ರೀಯಗೊಳಿಸುತ್ತೇವೆ. ನಿಮ್ಮ ಮೇಲೆ ಅರೆಸ್ಟ್‌ ವಾರೆಂಟ್‌ ಆಗಿದೆ ಎಂದು ಬೆದರಿಸಿದ್ದಾರೆ.

ಇನ್‌ಸ್ಪೆಕ್ಟರ್‌ನಂತೆ ವರ್ತನೆ: 

ಅನಂತರ ವಾಟ್ಸ್‌ಆ್ಯಪ್‌ ವೀಡಿಯೋ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿಯು ಪೊಲೀಸ್‌ ಅಧಿಕಾರಿ ಸಮವಸ್ತ್ರದಲ್ಲಿದ್ದ. ತಾನು ಅಂಧೇರಿ ಈಸ್ಟ್‌ ಮುಂಬಯಿಯ ಸೈಬರ್‌ ಇನ್‌ಸ್ಪೆಕ್ಟರ್‌ ಎಂದು ಹೇಳಿದ್ದಾನೆ. ನಿಮ್ಮ ಆಧಾರ್‌ ಕಾರ್ಡ್‌ ಲಿಂಕ್‌ನಲ್ಲಿರುವ ಬ್ಯಾಂಕ್‌ ಅಕೌಂಟ್‌ ನರೇಶ್‌ ಗೋಯೆಲ್‌ ಎಂಬಾತನ ಮನಿ ಲಾಂಡ್ರಿಂಗ್‌ ಕೇಸ್‌ನಲ್ಲಿ ಅಕೌಂಟ್‌ ಇನ್ವಾಲ್ಮೆಂಟ್‌ ಇದೆ ಎಂದು ತಿಳಿಸಿ ಆದಾಯದ ಮೂಲ ಪರಿಶೀಲನೆ ಮಾಡುವುದಾಗಿ ಹೇಳಿದ್ದಾನೆ. ಅನಂತರ ಸಂತೋಷ್‌ ಕುಮಾರ್‌ ಅವರ ಬ್ಯಾಂಕ್‌ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದು ಆ ಹಣವನ್ನು ಆರ್‌ಬಿಐಯಿಂದ ಫ‌ಂಡ್‌ ವೆರಿಫೀಕೆಶನ್‌ ಮಾಡಲು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾಕ್ಕೆ ಹಣ ಜಮೆ ಮಾಡಲು ಹೇಳಿ CIVIL LINES BRANCH NAGPUR ಅಕೌಂಟ್‌ ನಂಬ್ರ 43280321955, ಐಎಫ್ಎಸ್‌ಸಿ – SBIN 0011519 ವನ್ನು ನೀಡಿದ್ದು, ಹಣದ ಬಗ್ಗೆ ಕ್ಲೀಯರ್‌ ಆಗುವವರೆಗೆ ನಿಮ್ಮನ್ನು ವರ್ಚುವಲ್‌ ಆರೆಸ್ಟ್‌ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ಸಂತೋಷ್‌ ಕುಮಾರ್‌ ಅವರು ಸೆ. 12ರಂದು 89,00,000 ರೂ. ಹಣವನ್ನು ವರ್ಗಾಯಿಸಿದ್ದಾರೆ. Telecom Regulatory Authority of India ಹಾಗೂ ಪೊಲೀಸ್‌ ಅಧಿಕಾರಿಯ ಹೆಸರು ಹೇಳಿ ವಂಚನೆ ಎಸಗಿದ್ದಾರೆ ಎಂದು ಸೆನ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಸಂತೋಷ್‌ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.