ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಂದಿನ ಲಿಲಾವತಿ ಪಟ್ಟಣ ಎಂದು ಕರೆಸಿಕೊಂಡ ಗ್ರಾಮವು ವೀರೇಶ್ವರರ ಸುಮಾರು 40 ಪವಾಡಗಳಿಂದ ನಲವತ್ತವಾಡ ಎಂದು ಕರೆಸಿಕೊಂಡಿತು.
Advertisement
ಕಂಠಿಮಠದ ದೊಡ್ಡಾರ್ಯ ಹಾಗೂ ರುದ್ರಾಂಬೆ ತಾಯಿಯವರ ಉದರಲ್ಲಿ 1848ರಲ್ಲಿ ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜನಿಸಿದರು. ಪಟ್ಟಣದ ಹಿರೇಮಠದ ರಾಮಗಿರಿ ನಾಥರನ್ನು ವೀರೇಶ್ವರರು ಗುರುವಾಗಿ ಸ್ವೀಕರಿಸಿ, ಚಿಕ್ಕಂದಿನಿಂದಲೇ ಮನೆ ಸಂಸ್ಕಾರದಂತೆ ಗುರುಸೇವೆಲಿಂಗಪೂಜೆ ಜಂಗಮ ಪೂಜೆಯೊಂದಿಗೆ ಅಂದಿನ ಮುಲ್ಕಿ ಪರೀಕ್ಷೆ ಪಾಸಾದರು. ನಂತರ ಪಕ್ಕದ ಸಿದ್ದಾಪುರ ಗ್ರಾಮದ ಗಾಂವಠಿ ಶಾಲೆಯಲ್ಲಿ ದುಡಿಯುತ್ತ ಬಿದರಕುಂದಿಯ ಗುರುದೇವಿ ತಾಯಿಯವರನ್ನು ಮದುವೆಯಾದರು. ನಂತರ ವೃತ್ತಿ ಬಿಟ್ಟ ಶರಣರು, ಭಿಕ್ಷಾಟನೆ ಮೂಲಕ ದಿನಕ್ಕೆ 5 ಮನೆಗಳಿಗೆ
ಹೋಗಿ ಭಿಕ್ಷೆ ಮಾಡುವ ಕಾಯಕ ಶುರು ಮಾಡಿ, ಬೇಕು ಬೇಡ ಎಂಬಂತೆ ಜಂಗಮಗೆ ಬದುಕು ನಡೆಸಿದರು. ಬದುಕಿನಲ್ಲಿ ಹೆಚ್ಚಿದ ಸಂಕಷ್ಟಗಳಿಗೆ ನೊಂದ ಶರಣರು, ಸಂಸಾರದ ಸುಗಮಕ್ಕೆ ನೇಗಿಲು ಹಿಡಿದರು.
ಒಳಗಾದ ಇವರು ಅಲ್ಲಿಯ ವಾರದ ಮಲ್ಲಪ್ಪ ಎಂಬುವರಿಗೆ ಸಂತಾನ ಭಾಗ್ಯ ನೀಡುವುದರ ಮೂಲಕ ಪವಾಡ ಮಾಡಿದರು. ನಂತರ ಕೊಡೆಕಲ್ ಗ್ರಾಮದ ಶಿವಯೋಗಿಗಳ ಅಪ್ಪಣೆಯಂತೆ ಪತ್ನಿ ಸಂಗ ತೊರೆದು ಪರಮಾರ್ಥ ಜೀವನ ಪ್ರಾರಂಭಿಸಿದರು. ಇಡೀ ಜೀವನವನ್ನೇ ಸಮಾಜದ ತಿದ್ದುಪಡಿಗಾಗಿ, ಮೂಢನಂಬಿಕೆ ತಡೆಯುವಲ್ಲಿ ನಿರತರಾದ ಶರಣರು 1920ರಲ್ಲಿ ದೇಹ ತೊರೆಯುವ ಮುನ್ನ ಹಾನಗಲ್ಲ ಕುಮಾರ ಸ್ವಾಮಿಗಳ ದರ್ಶನಕ್ಕೆ ಆಸೆ ಹೊಂದಿದರು. ವಿಷಯ ತಿಳಿದ ಹಾನಗಲ್ ಶ್ರೀಗಳು ಎಂದೂ ವಾಹನಗಳಲ್ಲಿ ಪ್ರಯಾಣ ಮಾಡದ ಅವರು ವೀರೇಶ್ವರರನ್ನು
ಕಾಣಲು ರೈಲ್ವೆ ಮೂಲಕ ಬಂದು ವೀರೇಶ್ವರರನ್ನು ಕಂಡರು. ನಂತರ 72 ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿದ ವೀರೇಶ್ವರ ಶರಣರು ಇಂದಿಗೂ ಸಹ ಹೊರ ರಾಜ್ಯ ಮಹಾರಷ್ಟ್ರದಲ್ಲೂ ಸಹ ಅಲ್ಲಿನ ಜನರು ಇವರನ್ನು ಆರಾಧಿಸುತ್ತಿದ್ದಾರೆ.
Related Articles
ದಾರ್ಶನಿಕ ಶರಣ ಮೂರ್ತಿಗಳಿಂದ ನಿರ್ಮಾಣಗೊಂಡ ಮಹಾಮನೆ ನೋಡಲು ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಿರವುದಕ್ಕೆ ನಿಜಕ್ಕೂ ಶರಣರ 40 ಪವಾಡಗಳೇ ಕಾರಣ.
Advertisement