Advertisement

ʼವಿರಾಟಪುರ ವಿರಾಗಿ’ಚಲನಚಿತ್ರ ನಮ್ಮೆಲ್ಲರ ಪುಣ್ಯ

03:22 PM Dec 04, 2022 | Team Udayavani |

ಹಾವೇರಿ: ಮಹಾ ತಪಸ್ವಿಗಳಾದ ಹಾನಗಲ್ಲ ಕುಮಾರ ಮಹಾಶಿವಯೋಗಿಗಳು ನೆಮ್ಮಲ್ಲರಿಗೂ ಜೀವನ ಮಾರ್ಗ ತೋರಿಸುವ ಭಕ್ತಿಯ ದಾರಿಯನ್ನು ಕರುಣಿಸಿದ್ದಾರೆ. ಸ್ವಾಮೀಜಿಗಳ ಶಿಕ್ಷಣ ಕೇಂದ್ರವಾದ ಶಿವಯೋಗ ಮಂದಿರ ಸ್ಥಾಪನೆಯ ರೂವಾರಿಯಾಗಿದ್ದಾರೆ. ಅಂತಹ ಮಹಾನ್‌ ಚೇತನರ ಜೀವನ ಚರಿತ್ರೆಯ “ವಿರಾಟಪುರ ವಿರಾಗಿ’ ಚಲನಚಿತ್ರ ಬರುತ್ತಿರುವುದು ನಮ್ಮೆಲ್ಲರ ಪುಣ್ಯವೇ ಸರಿ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶನಿವಾರ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ “ವಿರಾಟಪುರ ವಿರಾಗಿ’ ಚಲನಚಿತ್ರದ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಹುಕ್ಕೇರಿಮಠದ ಪೂಜ್ಯರ ಆಶೀರ್ವಾದದೊಂದಿಗೆ ಇಂದು ಚಲನಚಿತ್ರದ ಪೋಸ್ಟರ್‌ ಮತ್ತು ಟೀಸರ್‌ ಬಿಡುಗಡೆಯಾಗುತ್ತಿದೆ. ನಾವೆಲ್ಲ ಚಲನಚಿತ್ರ ವೀಕ್ಷಿಸುವುದರೊಂದಿಗೆ ಶ್ರೀಗಳವರ ಸನ್ಮಾಗದಲ್ಲಿ ಸಾಗೋಣ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಂತೇಶ ಕೋರಿಶೆಟ್ಟರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಕ್ತಿ ಪ್ರಧಾನ ಸಿನಿಮಾಗಳು ಸುಂದರವಾಗಿ ಮೂಡಿಬರುತ್ತಿರುವುದು ಸಂತಸದ ವಿಷಯ. ಜೊತೆಗೆ ಇದೇ ಕಾರ್ಯಕ್ರಮ ಬೆಂಗಳೂರಿನಲ್ಲಿ ಹುಕ್ಕೇರಿಮಠದ ಮಠಾಧ್ಯಕ್ಷರಾದ ಸದಾಶಿವ ಶ್ರೀಗಳವರ ಸಾನ್ನಿಧ್ಯದಲ್ಲಿ ಪೋಸ್ಟರ್‌ ಮತ್ತು ಟೀಸರ್‌ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ನಾವೆಲ್ಲರೂ ಚಲನಚಿತ್ರ ವೀಕ್ಷಿಸೋಣ. ಪೂಜ್ಯರ ಜೀವನ ಚರಿತ್ರೆ ಯಿಂದ ಸ್ಫೂರ್ತಿದಾಯಕ ಜೀವನ ನಡೆ ಸೋಣ. ಸುಸಂಸ್ಕೃತರಾಗೋಣ ಎಂದರು.

ಶಿವಬಸವ ಕಲ್ಯಾಣ ಮಂಟಪದ ಚೇರಮನ್‌ ರಾಚಪ್ಪ ಮಾಗನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜಣ್ಣ ಪಟ್ನದ ಭಾಗವಹಿಸಿದ್ದರು.

Advertisement

ಈ ಸಂದರ್ಭದಲ್ಲಿ ದಾಸೋಹ ಸಮಿತಿ ಉಪಾಧ್ಯಕ್ಷ ವಿ.ಸಿ.ವಳಸಂಗದ, ಕಾರ್ಯದರ್ಶಿ ಆರ್‌.ಎಸ್‌.ಲಂಬಿ, ಕಲ್ಯಾಣ ಮಂಟಪ ಸಮಿತಿ ಪದಾ ಧಿಕಾರಿಗಳಾದ ಜೆ.ಬಿ.ಸಾವಿರಮಠ, ಶಿವಲಿಂಗೇಶ್ವರ ಕಂಪ್ಯೂಟರ್ನ ಸುರೇಶ ಮುರಡಣ್ಣನವರ, ರಾಜಯೋಗಿ ಸೇವಾ ಸಮಿತಿ ಕಾರ್ಯದರ್ಶಿ ಶಿವಬಸವರಾಜ ಬೆಳಗಾವಿ, ಶ್ರೀ ಹುಕ್ಕೇರಿಮಠದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ಸದ್ಭಕ್ತರು ಪಾಲ್ಗೊಂಡಿದ್ದರು.

ರಾಚೋಟೇಶ್ವರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ದಾನೇಶ್ವರಿ ಹಾಲಪ್ಪನವರ, ಹುಕ್ಕೇರಿಮಠದ ಪ್ರೌಢಶಾಲಾ ವಿದ್ಯಾರ್ಥಿನಿ ಸೌಮ್ಯ ಹಿರೇಗೌಡರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾಪೀಠದ ಚೇರಮನ್‌ ಶಿವಬಸಪ್ಪ ಮುಷ್ಠಿ ಸ್ವಾಗತಿಸಿದರು. ವರ್ತಕ ಪಿ.ಡಿ.ಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆಯ ಶಿಕ್ಷಕ ಸುನೀಲ ಮಳೆಪ್ಪನವರ ನಿರೂಪಿಸಿ, ಮೃತ್ಯುಂಜಯ ವಳಸಂಗದ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next