Advertisement

ಕುಷ್ಟಗಿ: ಮಾರುತಿ ಚಿತ್ರಮಂದಿರದಲ್ಲಿ ವಿರಾಟಪುರ ವಿರಾಗಿ ಚಲನಚಿತ್ರ ಪ್ರದರ್ಶನ

01:14 PM Jan 14, 2023 | Team Udayavani |

ಕುಷ್ಟಗಿ: ಹಾನಗಲ್ಲ ಶ್ರೀ ಗುರು ಕುಮಾರಸ್ವಾಮೀಗಳು ಇಲ್ಲದೇ ಇದ್ದಲ್ಲಿ ನಮ್ಮಂತಹ ಮಠಾಧೀಶರು ಕಾವಿ ತೊಡುತ್ತಿರಲಿಲ್ಲ ಎಂದು ಕುಷ್ಟಗಿ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಕುಷ್ಟಗಿ ಮಾರುತಿ ಚಿತ್ರಮಂದಿರದಲ್ಲಿ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧರಿತ ವಿರಾಟಪುರ ವಿರಾಗಿ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಾನಗಲ್ ಗುರು ಕುಮಾರಸ್ವಾಮಿಗಳು ವೀರಶೈವ ಲಿಂಗಾಯತ ಧರ್ಮ ಸಂಸ್ಥಾಪಕರಾಗಿ ಧರ್ಮವನ್ನು ಮುನ್ನೆಡಿಸಿದ ಕೀರ್ತಿ ಹಾನಗಲ್ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ. ಶಿವಯೋಗ ಮಂದಿರದಲ್ಲಿ ಗೋವು ಸಾಕಾಣಿಕೆ, ದೀನ- ದಲಿತರಿಗೆ ಸನ್ಮಾರ್ಗವನ್ನು ಕರುಣಿಸಿದವರಾಗಿದ್ದಾರೆ. ಇಂತಹ ಮಹಾನೀಯರ ಚಿತ್ರವನ್ನು ಈಗಿನ ಪೀಳಿಗೆಗೆ ತಿಳಿಯಲಿ ಎನ್ನುವ ಸದುದ್ದೇಶದ ಹಿನ್ನೆಲೆಯಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.‌ಈ ಚಿತ್ರವನ್ನು ಸರ್ವ ಧರ್ಮಿಯರು ವೀಕ್ಷಿಸಿ ಅವರ ಜೀವನ ಮೌಲ್ಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಾರುತಿ ಚಿತ್ರ ಮಂದಿರದಲ್ಲಿ ಪ್ರತಿ ದಿನ ನಾಲ್ಕು ಪ್ರದರ್ಶನಗಳಿದ್ದು, ಭಕ್ತಾದಿಗಳು ಈ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದ ಅವರ ಮಕರ ಸಂಕ್ರಾಂತಿಯ ಶುಭಾಶಯಗಳು ಹಾರೈಸಿದರು.

ದೇವೇಂದ್ರಪ್ಪ ಬಳೂಟಗಿ, ಎಸ್.ಎಚ್. ಹಿರೇಮಠ, ಟಿ.ಬಸವರಾಜ್, ಕೆ.ಮಹೇಶ, ದೊಡ್ಡಬಸನಗೌಡ ಪಾಟೀಲ ಬಯ್ಯಾಪೂರ, ಬಸನಗೌಡ ಪಾಟೀಲ, ಶಿವಕುಮಾರ ಗಂಧದಮಠ, ಶಾಂತರಾಜ ಗೋಗಿ, ಹ.ಯ.ಈಟಿಯವರ್,  ಮುತ್ತಣ್ಣ ಬಾಚಲಾಪೂರ, ಚಿತ್ರಮಂದಿರ ಮಾಲೀಕ ವಿಶ್ವನಾಥ ಮಹಾಂತಯ್ಯಮಠ, ವ್ಯವಸ್ಥಾಪಕ ನವಾಜ್, ಕಿರಣ ಜ್ಯೋತಿ, ಬಸವರಾಜ ಗಾಣಗೇರ, ವೀರೇಶ ಬಾಗಲವಾಡ ಹಿರೇಮಠ, ಮಲ್ಲಪ್ಪ ಗದ್ದಿ, ಶರಣಪ್ಪ ಬೆಳ್ಯಾಲ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next