Advertisement

ವಿರಾಟ್ ಕೊಹ್ಲಿ ಭಾರತದ ಅತ್ಯುತ್ತಮ ನಾಯಕ ಎನ್ನುವುದಕ್ಕೆ ಇಲ್ಲಿದೆ ದಾಖಲೆಗಳ ಸಾಕ್ಷಿ

09:21 AM Jan 16, 2022 | Team Udayavani |

ಬೆಂಗಳೂರು: ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ ನ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಮಾತ್ರವಲ್ಲದೆ, ಎಲ್ಲಾ ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿ ಉಳಿಯುತ್ತಾರೆ. ನಾಯಕನಾಗಿ ಕೊಹ್ಲಿಯ ದಾಖಲೆಗಳು ಅದ್ಭುತವಾಗಿವೆ, ಅದರಲ್ಲೂ ಟೆಸ್ಟ್ ಮಾದರಿಯಲ್ಲೂ ಇನ್ನೂ ಉತ್ತಮವಾಗಿದೆ.

Advertisement

2015 ರಲ್ಲಿ ಎಂಎಸ್ ಧೋನಿ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ನಂತರ ಕೊಹ್ಲಿ ಅಧಿಕೃತವಾಗಿ ಭಾರತೀಯ ಟೆಸ್ಟ್ ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಭಾರತ ತಂಡವನ್ನು ಟೆಸ್ಟ್‌ನಲ್ಲಿ ಕೀರ್ತಿಯ ಶಿಖರಕ್ಕೆ ಕೊಂಡೊಯ್ದಿದ್ದಾರೆ. ಕೊಹ್ಲಿ ನಾಯಕತ್ವದಡಿಯಲ್ಲಿ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಪುನಃ ಅಗ್ರ ಸ್ಥಾನಕ್ಕೇರಿದಲ್ಲದೆ, ಮೊದಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ಗೂ ತಲುಪಿತ್ತು.

ವಿರಾಟ್ ಶನಿವಾರ ಟೆಸ್ಟ್ ತಂಡ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಟಿ20 ತಂಡದ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದ ವಿರಾಟ್  ಕೈಯಿಂದ ಬಳಿಕ ಏಕದಿನ ತಂಡದ ನಾಯಕತ್ವವೂ ಜಾರಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮುಗಿದ ಕೂಡಲೇ ವಿರಾಟ್ ದಿಢೀರನೆ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

ವಿರಾಟ್ ಸಾರಥ್ಯದಲ್ಲಿ ಭಾರತವು ಆಡಿದ ಪ್ರತಿಯೊಂದು ತವರಿನ ಸರಣಿಯನ್ನು ಗೆದ್ದು, ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಕಠಿಣ ತಂಡಗಳನ್ನು ಸೋಲಿಸಿದೆ. ಬ್ಯಾಟರ್ ಗಳ ಮತ್ತು ಸ್ಪಿನ್ ಬೌಲರ್ ಗಳ ತಂಡವಾಗಿದ್ದ ಟೀಂ ಇಂಡಿಯಾವನ್ನು ವೇಗಿಗಳ ತಂಡವನ್ನಾಗಿಸಿದ ಕೀರ್ತಿ ಕೇವಲ ವಿರಾಟ್ ಗೆ ಸಲ್ಲಬೇಕು.

ಇದನ್ನೂ ಓದಿ:ಅಂಡರ್ 19 ವಿಶ್ವಕಪ್: ಹರಿಣಗಳನ್ನು ಮಣಿಸಿ ಶುಭಾರಂಭಗೈದ ಟೀಂ ಇಂಡಿಯಾ

Advertisement

68 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ವಿರಾಟ್ 40ರಲ್ಲಿ ಗೆಲುವು  ಸಾಧಿಸಿದ್ದಾರೆ. 17 ಪಂದ್ಯಗಳಲ್ಲಿ ತಂಡ ಸೋಲನುಭವಿಸಿದ್ದರೆ, 11 ಪಂದ್ಯಗಳು ಡ್ರಾ ಆಗಿದೆ.

ಒಂದು ಕ್ಯಾಲೆಂಡರ್ ವರ್ಷದಲ್ಲಿ 4 ವಿದೇಶಿ ಟೆಸ್ಟ್ ವಿಜಯಗಳು: ಕೊಹ್ಲಿ ಎರಡು ಬಾರಿ ಸಾಧನೆ ಮಾಡಿದ ಏಕೈಕ ಭಾರತೀಯ ನಾಯಕ., ಭಾರತವು ಮೊದಲ ಬಾರಿಗೆ ಈ ಸಾಧನೆಯನ್ನು ಮಾಡಿದಾಗಲೂ ಕೊಹ್ಲಿಯೇ ನಾಯಕತ್ವ ವಹಿಸಿದ್ದರು.

ಭಾರತವು 2021ರ ವರ್ಷದಲ್ಲಿ ಬ್ರಿಸ್ಬೇನ್, ಲಾರ್ಡ್ಸ್, ಓವಲ್ ಮತ್ತು ಸೆಂಚುರಿಯನ್‌ನಲ್ಲಿ ಟೆಸ್ಟ್‌ಗಳನ್ನು ಗೆದ್ದುಕೊಂಡಿತು, 2018 ರಲ್ಲಿ ಭಾರತವು ಜೋಹಾನ್ಸ್‌ಬರ್ಗ್, ನಾಟಿಂಗ್‌ಹ್ಯಾಮ್, ಅಡಿಲೇಡ್ ಮತ್ತು ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದಿತ್ತು.

ಸೆಂಚೂರಿಯನ್‌ನಲ್ಲಿ ಗೆದ್ದ ಮೊದಲ ಏಷ್ಯಾದ ನಾಯಕ: ಕೊಹ್ಲಿ ಸೆಂಚೂರಿಯನ್‌ನಲ್ಲಿ ಟೆಸ್ಟ್ ಗೆಲುವು ದಾಖಲಿಸಿದ ಮೂರನೇ ನಾಯಕ ಮತ್ತು ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲೆರಡು ಜಯಗಳು 2000 ರಲ್ಲಿ ಇಂಗ್ಲೆಂಡ್‌ನ ನಾಸರ್ ಹುಸೇನ್ ಮತ್ತು 2014 ರಲ್ಲಿ ಆಸ್ಟ್ರೇಲಿಯಾದ ಮೈಕೆಲ್ ಕ್ಲಾರ್ಕ್ ನಾಯಕತ್ವದಲ್ಲಿ ಬಂದಿತ್ತು.

ಸೇನ ದೇಶಗಳಲ್ಲಿ ಏಷ್ಯನ್ ನಾಯಕನಿಂದ ಅತಿ ಹೆಚ್ಚು ಟೆಸ್ಟ್ ಗೆಲುವುಗಳು: 23 ಟೆಸ್ಟ್‌ಗಳಲ್ಲಿ (13 ಸೋಲು ಮತ್ತು ಡ್ರಾ 3) ಕೊಹ್ಲಿ ನೇತೃತ್ವದಲ್ಲಿ ಭಾರತ ಏಳು ಗೆಲುವು ಸಾಧಿಸಿದೆ. SENA ದೇಶಗಳಲ್ಲಿ ಏಷ್ಯಾದ ನಾಯಕನಿಂದ ಅತಿ ಹೆಚ್ಚು ಗೆಲುವು ಇದು. ವಿದೇಶಿ ಟೆಸ್ಟ್‌ಗಳಲ್ಲಿ ಕೊಹ್ಲಿ 36 ಟೆಸ್ಟ್‌ಗಳಲ್ಲಿ 16 ಪಂದ್ಯಗಳನ್ನು ಗೆದ್ದಿದ್ದಾರೆ.

ಎರಡು ಬಾಕ್ಸಿಂಗ್ ಡೇ ಪಂದ್ಯಗಳನ್ನು ಗೆದ್ದ ಏಕೈಕ ಏಷ್ಯನ್ ನಾಯಕ: ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ, ವಿರಾಟ್ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಲ್ಲಿ ತನ್ನ ತಂಡವನ್ನು ಎರಡು ಗೆಲುವಿಗೆ ಕಾರಣವಾದ ಮೊದಲ ಏಷ್ಯನ್ ಕ್ರಿಕೆಟಿಗರಾದರು. ಇದಕ್ಕೂ ಮೊದಲು, ಭಾರತವು 2018 ರಲ್ಲಿ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದಿತ್ತು.

ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದ ಮೊದಲ ಭಾರತೀಯ ನಾಯಕ: ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಏಕೈಕ ಭಾರತೀಯ ನಾಯಕ ವಿರಾಟ್. ಈ ಹಿಂದೆ, 2018 ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತವು ರಾಷ್ಟ್ರದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಈ ಬಾರಿಯ ಸರಣಿಯಲ್ಲಿ ಸೆಂಚೂರಿಯನ್ ನಲ್ಲಿ ಗೆಲುವು ದಾಖಲಿಸಿದೆ.

ಭಾರತ ಟೆಸ್ಟ್ ನಾಯಕನಾಗಿ (68) ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ, ಮತ್ತು ಅತಿ ಹೆಚ್ಚು ಟೆಸ್ಟ್ ಗೆಲುವುಗಳ ಭಾರತೀಯ ದಾಖಲೆಯನ್ನು (40) ಹೊಂದಿದ್ದಾರೆ. ಗ್ರೇಮ್ ಸ್ಮಿತ್, ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ಮಾತ್ರ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಗಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ.

ಭಾರತ ತಂಡದ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಶತಕ (20) ಗಳಿಸಿದ ದಾಖಲೆಯನ್ನೂ ಕೊಹ್ಲಿ ಹೊಂದಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತವು ಅಕ್ಟೋಬರ್ 2016 ರಿಂದ ಮಾರ್ಚ್ 2020 ರ ಆರಂಭದವರೆಗೆ ಸತತ 42 ತಿಂಗಳವರೆಗೆ ಐಸಿಸಿ ಶ್ರೇಯಾಂಕದಲ್ಲಿ ನಂಬರ್ ಒನ್ ಟೆಸ್ಟ್ ತಂಡವಾಗಿತ್ತು. ಅಂದಹಾಗೆ ಕೊಹ್ಲಿ ಟೆಸ್ಟ್ ನಾಯಕತ್ವ ಸ್ವೀಕರಿಸುವ ವೇಳೆ ಭಾರತ ಏಳನೇ ಶ್ರೇಯಾಂಕದಲ್ಲಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next