Advertisement

ವಿರಾಟ್ ಕೊಹ್ಲಿ ಬರ್ತ್ ಡೇ: ಮಾಜಿ ನಾಯಕ ಹೊಂದಿರುವ ದಾಖಲೆಗಳ ಪಟ್ಟಿ ಇಲ್ಲಿದೆ

09:34 AM Nov 05, 2022 | Team Udayavani |

ಮುಂಬೈ: ಭಾರತದ ಸ್ಟಾರ್ ಬ್ಯಾಟರ್, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಭಾರತ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಅಜೇಯ ಅರ್ಧಶತಕಗಳನ್ನು ಬಾರಿಸಿರುವ ಕೊಹ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ ನಲ್ಲಿದ್ದಾರೆ.

Advertisement

ಅವರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಔಟಾಗದೆ 82 ರನ್ ಗಳಿಸಿದರು ಮತ್ತು ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶದ ವಿರುದ್ಧ ಕ್ರಮವಾಗಿ 62 ಮತ್ತು ಔಟಾಗದೆ 64 ರನ್ ಗಳಿಸಿದರು. ಇದುವರೆಗೆ 220 ರನ್ ಗಳಿಸಿರುವ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ಕೊಹ್ಲಿ ಉತ್ತಮ ಲಯದಲ್ಲಿರಲಿಲ್ಲ, ಆದರೆ ಏಷ್ಯಾ ಕಪ್ ನಲ್ಲಿ ಫಾರ್ಮ್‌ ಗೆ ಮರಳಿದ ಕೊಹ್ಲಿ ಅಫ್ಘಾನ್ ವಿರುದ್ಧ ಅದ್ಭುತ ಶತಕ ಬಾರಿಸಿದರು.

ಹುಟ್ಟುಹಬ್ಬದ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಕೆಲವು ದಾಖಲೆಗಳು ಇಲ್ಲಿವೆ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ (1,065).

Advertisement

ಏಕದಿನದಲ್ಲಿ 8,000, 9,000, 10,000, 11,000, ಮತ್ತು 12,000 ರನ್‌ಗಳನ್ನು ವೇಗವಾಗಿ ತಲುಪಿದ ಆಟಗಾರ.

ಅಂತಾರಾಷ್ಟ್ರೀಯ ಟಿ20 ಗಳಲ್ಲಿ ಹೆಚ್ಚು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗಳು (7)

ಅಂತಾರಾಷ್ಟ್ರೀಯ ಟಿ20 ಗಳಲ್ಲಿ ಪಂದ್ಯದ ಹೆಚ್ಚಿನ ಆಟಗಾರ ಪ್ರಶಸ್ತಿಗಳು (15)

ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ (3,932)

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೃತ್ತಿಜೀವನದ ಗರಿಷ್ಠ ಬ್ಯಾಟಿಂಗ್ ಸರಾಸರಿ (53.13)

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೇಗವಾಗಿ 3,000 ರನ್. (81 ಇನ್ನಿಂಗ್ಸ್)

ಏಕದಿನ ಪಂದ್ಯಗಳಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಶತಕಗಳು (9 vs ವೆಸ್ಟ್ ಇಂಡೀಸ್)

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳು (37)

ಟೆಸ್ಟ್‌ ನಲ್ಲಿ ಭಾರತದ ನಾಯಕನಾಗಿ (68) ಅತಿ ಹೆಚ್ಚು ಪಂದ್ಯಗಳಲ್ಲಿ ಆಟಗಾರ

ಟೆಸ್ಟ್‌ನಲ್ಲಿ ಭಾರತದ ನಾಯಕನಾಗಿ (40) ಅತಿ ಹೆಚ್ಚು ಗೆಲುವುಗಳು

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಏಕೈಕ ಭಾರತದ ನಾಯಕ (2018/19)

ಏಕದಿನ ಪಂದ್ಯಗಳಲ್ಲಿ ಯಶಸ್ವಿ ಚೇಸಿಂಗ್‌ ಗಳಲ್ಲಿ (26) ಭಾರತದ ಪರ ಅತಿ ಹೆಚ್ಚು ಶತಕಗಳು

Advertisement

Udayavani is now on Telegram. Click here to join our channel and stay updated with the latest news.

Next