Advertisement

ಏಷ್ಯಾ ಕಪ್ ವೇಳೆ ಟೀಂ ಇಂಡಿಯಾಗೆ ಮರಳಲಿದ್ದಾರೆ ವಿರಾಟ್ ಕೊಹ್ಲಿ

04:40 PM Jul 31, 2022 | Team Udayavani |

ಮುಂಬೈ: ಕಳಪೆ ಫಾರ್ಮ್ ನಲ್ಲಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬರುವ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಆಡಬೇಕೆ ಎಂಬ ಬಗ್ಗೆ ವಿಶ್ವದಾದ್ಯಂತದ ಕ್ರಿಕೆಟ್ ತಜ್ಞರು ತಮ್ಮ ಅಭಿಪ್ರಾಯಗಳನ್ನು ನೀಡುತ್ತಿರುವಾಗಲೇ ವಿರಾಟ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಇದರ ಬಳಿಕ ಅವರು ಜಿಂಬಾಬ್ವೆ ವಿರುದ್ಧದ ಏಕದಿನ ತಂಡಕ್ಕೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಶನಿವಾರ ಪ್ರಕಟ ಮಾಡಿದ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ಹೆಸರು ಇರಲಿಲ್ಲ. ಹಾಗಾದರೆ ವಿರಾಟ್ ಕೊಹ್ಲಿ ಯಾವಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಮರಳುತ್ತಾರೆ ಎಂಬ ಪ್ರಶ್ನೆ ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಉತ್ತರ ಏಷ್ಯಾ ಕಪ್ ಕೂಟ.

Advertisement

ಪಿಟಿಐ ವರದಿಯ ಪ್ರಕಾರ, ಭಾರತದ ಮಾಜಿ ನಾಯಕ ವಿರಾಟ್ ಏಷ್ಯಾ ಕಪ್ ಟಿ20 ಪಂದ್ಯಾವಳಿಯೊಂದಿಗೆ ಟೀಂ ಇಂಡಿಯಾಗೆ ಮರಳಲಿದ್ದಾರೆ.  ಏಷ್ಯಾ ಕಪ್ ಕೂಟ ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದ್ದು, ಶ್ರೀಲಂಕಾ ಆತಿಥ್ಯ ವಹಿಸಲಿದೆ.

ತಾನು ಏಷ್ಯಾ ಕಪ್‌ನಿಂದಲೇ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಆಯ್ಕೆಗಾರರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ನಂತರ ಟಿ20 ವಿಶ್ವಕಪ್ ವರೆಗೆ ಯಾವುದೇ ವಿಶ್ರಾಂತಿ ಪಡೆಯದೇ ತಂಡದ ಆಯ್ಕೆಗೆ ಲಭ್ಯವಿರಲಿದ್ದಾರೆ ಎಂದು ಮೂಲಗಳು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next