Advertisement

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

08:14 AM Jan 17, 2022 | Team Udayavani |

ಹೊಸದಿಲ್ಲಿ: ನಾಯಕತ್ವ ತ್ಯಜಿಸಿದ ದಿಢೀರ್‌ ಬೆಳವಣಿಗೆಯನ್ನು ಗಮನಿಸಿದಾಗ ಕೊಹ್ಲಿ ಮತ್ತೆ ಬಿಸಿಸಿಐಗೆ ಸಡ್ಡು ಹೊಡೆದರೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

Advertisement

ಮತ್ತೊಂದು ಬೌನ್ಸರ್‌?
ದಕ್ಷಿಣ ಆಫ್ರಿಕಾಕ್ಕೆ ವಿಮಾನ ಏರುವ ಮೊದಲು ವಿರಾಟ್‌ ಕೊಹ್ಲಿ ಬಿಸಿಸಿಐ ವಿರುದ್ಧ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದರು. ಟಿ20 ನಾಯಕತ್ವದಲ್ಲಿ ಮುಂದುವರಿಯುವಂತೆ ತನಗೆ ಸೂಚಿಸಲಾಗಿತ್ತು ಎಂಬ ಗಂಗೂಲಿ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದರು.

ಇದೀಗ ಟೆಸ್ಟ್‌ ನಾಯಕತ್ವದ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಟ್‌ ಕೊಹ್ಲಿ, ಬಿಸಿಸಿಐ ಮತ್ತು ಆಯ್ಕೆ ಸಮಿತಿಯತ್ತ ಮತ್ತೊಂದು ಬೌನ್ಸರ್‌ ಎಸೆಯುವ ಎಲ್ಲ ಸಾಧ್ಯತೆ ಇದೆ. ಕೊಹ್ಲಿ ಇದಕ್ಕೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ. ಆಗ ಈ ಪ್ರಕರಣ ಇನ್ನೊಂದು ಟ್ವಿಸ್ಟ್‌ ಪಡೆಯುವುದರಲ್ಲಿ ಅನುಮಾನವಿಲ್ಲ.

ತಾನೇಕೆ ಟೆಸ್ಟ್‌ ತಂಡದ ನಾಯಕತ್ವ ತ್ಯಜಿಸಿದೆ ಎಂದು ವಿರಾಟ್‌ ಕೊಹ್ಲಿ ಎಲ್ಲೂ ಹೇಳಿಲ್ಲ ಎಂಬುದು ಉಲ್ಲೇಖನೀಯ. ಇದರ ಹಿನ್ನೆಲೆ ಬಹಳ ಕುತೂಹಲಕಾರಿ ಹಾಗೂ ಅಷ್ಟೇ ವಿವಾದಾತ್ಮಕವಾಗಿರುವ ಎಲ್ಲ ಸಾಧ್ಯತೆ ಇದೆ. ಇದರ ಹಿಂದಿನ “ರಾಜಕೀಯ’ ಕೂಡ ಬಯಲಾಗುವುದು ನಿಶ್ಚಿತ. “ಡೋಂಟ್‌ ಕೇರ್‌’ ಸ್ವಭಾವದ ಕೊಹ್ಲಿ ಕ್ರಿಕೆಟಿಗೂ ಗುಡ್‌ಬೈ ಹೇಳಿದರೆ ಅಚ್ಚರಿಯಿಲ್ಲ. ಭಾರತವಿನ್ನು ಕೆ.ಎಲ್‌. ರಾಹುಲ್‌ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ತಂಡದಲ್ಲಿ ಕೊಹ್ಲಿ ಕೂಡ ಇದ್ದಾರೆ.

ಶಾಕ್‌ ನೀಡಿತು: ರೋಹಿತ್‌
“ಕೊಹ್ಲಿ ಟೆಸ್ಟ್‌ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಸುದ್ದಿ ಕೇಳಿ ನಿಜಕ್ಕೂ ಆಘಾತವಾಯಿತು. ಆದರೆ ಭಾರತದ ನಾಯಕನಾಗಿ ಯಶಸ್ವಿ ಪ್ರದರ್ಶನ ನೀಡಿದಕ್ಕೆ ಅವರಿಗೆ ಅಭಿನಂದನೆಗಳು’ ಎಂದು ಟೀಮ್‌ ಇಂಡಿಯಾ ಸೀಮಿತ ಓವರ್‌ ತಂಡಗಳ ನಾಯಕ ರೋಹಿತ್‌ ಶರ್ಮ ಟ್ವೀಟ್‌ ಮಾಡಿದ್ದಾರೆ. ಜತೆಗೆ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಜತೆಗಿರುವ ಫೋಟೊ ಒಂದನ್ನು ಪೋಸ್ಟ್‌ ಮಾಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next