Advertisement

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

11:19 PM Sep 19, 2021 | Team Udayavani |

ದುಬಾೖ: ಮೊನ್ನೆಯಷ್ಟೇ ಟೀಮ್‌ ಇಂಡಿಯಾದ ಟಿ20 ನಾಯಕತ್ವವನ್ನು ಬಿಡುವುದಾಗಿ ತಿಳಿಸಿದ ವಿರಾಟ್‌ ಕೊಹ್ಲಿ ಇದೀಗ ಆರ್‌ಸಿಬಿ ನಾಯಕತ್ವಕ್ಕೂ ಗುಡ್‌ಬೈ ಹೇಳುವುದಾಗಿ ಘೋಷಿಸಿದ್ದಾರೆ.

Advertisement

2021ನೇ ಸಾಲಿನ ಐಪಿಎಲ್‌ ಮುಗಿದ ಬಳಿಕ ಆರ್‌ಸಿಬಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಯುವುದಾಗಿ ರವಿವಾರ ರಾತ್ರಿ ತಿಳಿಸಿದ್ದಾರೆ.

2013ರಲ್ಲಿ ವೆಟರಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ವಿರಾಟ್‌ ಕೊಹ್ಲಿ, 132 ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದಾರೆ. 62ರಲ್ಲಿ ತಂಡ ಜಯಿಸಿದ್ದು, 66ರಲ್ಲಿ ಸೋಲನುಭವಿಸಿದೆ. 4 ಪಂದ್ಯಗಳು ಫಲಿತಾಂಶ ಕಂಡಿಲ್ಲ.

“ಇದೊಂದು ಅಮೋಘ ಹಾಗೂ ಸ್ಫೂರ್ತಿದಾಯಕ ಪಯಣ. ಪ್ರತಿಭಾನ್ವಿತರ ಪಡೆಯ ನಾಯಕತ್ವ ವಹಿಸುವ ಅವಕಾಶ ಕಲ್ಪಿಸಿಕೊಟ್ಟ ಆರ್‌ಸಿಬಿ ಹಾಗೂ ಈ ಫ್ರಾಂಚೈಸಿಯ ಕುಟುಂಬಕ್ಕೆ ಧನ್ಯವಾದಗಳು’ ಎಂಬುದಾಗಿ ಕೊಹ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next