ಲಂಡನ್: ಗೂಗಲ್‌ನ ಇಂಡಿಯನ್-ಅಮೆರಿಕನ್ ಸಿಇಒ ಸುಂದರ್ ಪಿಚೈ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮೇಲೆ ಆಸಕ್ತಿ ವಹಿಸಿದ್ದು, ಯಾವ ತಂಡಗಳು ಫೈನಲ್ ತಲುಪಬಲ್ಲವು ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರಕಾರ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ಪ್ರಶಸ್ತಿ ಸಮರದಲ್ಲಿ ಸೆಣಸಲಿವೆ.
ಕ್ಯಾಲಿಫೋರ್ನಿಯಾ ಮೂಲದ 46ರ ಹರೆಯದ “ಇಂಟರ್ನೆಟ್ ದೈತ್ಯ’ ತಾನೋರ್ವ ಕ್ರಿಕೆಟ್ ಅಭಿಮಾನಿ ಎಂದೂ, ಅಮೆರಿಕಕ್ಕೆ ಬಂದ ಆರಂಭದಲ್ಲಿ ಬೇಸ್‌ಬಾಲ್ ಬಗ್ಗೆ ಒಲವು ಹೊಂದಿದ್ದೆ ಎಂಬುದಾಗಿ ಹೇಳಿದ್ದಾರೆ.
“ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್‌ನಲ್ಲಿ ಎದುರಾಗಲಿವೆ. ಆದರೆ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಕೂಡ ಅತ್ಯುತ್ತಮ ತಂಡಗಳು’ ಎಂದು ಪಿಚೈ ಹೇಳಿದ್ದಾರೆ. ಯುಎಸ್‌ಐಬಿಸಿ ಅಧ್ಯಕ್ಷ ನಿಶಾ ದೇಸಾಯಿ ಬಿಸ್ವಾಲ್ ಅವರ ಪ್ರಶ್ನೆಗೆ ಪಿಚೈ ಜವಾಬು ನೀಡುತ್ತಿದ್ದರು. “ವಿಶ್ವಕಪ್ ಒಂದು ಅದ್ಭುತ ಹಾಗೂ ರೋಮಾಂಚಕಾರಿ ಪಂದ್ಯಾವಳಿ. ನಾನು ಭಾರತವನ್ನು ಬೆಂಬಲಿಸು ತ್ತೇನೆ. ಆದರೆ ಇಲ್ಲಿ ಬಹಳಷ್ಟು ಸವಾಲುಗಳಿವೆ’ ಎಂದು
ಪಿಚೈ ಹೇಳಿದರು.