Advertisement

ಅಸಾಧ್ಯವೆಂದೆಣಿಸಿದ ದಾಖಲೆಗಳನ್ನು ಕೊಹ್ಲಿ ಮುರಿಯುತ್ತಿದ್ದಾರೆ: ದ್ರಾವಿಡ್

09:23 AM May 22, 2019 | keerthan |

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಮಾಜಿ ಆಟಗಾರ, ಭಾರತ ಅಂಡರ್ 19 ಮತ್ತು ಭಾರತ ಎ ತಂಡಗಳ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೊಹ್ಲಿ ಪ್ರತಿ ಪಂದ್ಯದಲ್ಲೂ ತನ್ನ ಆಟವನ್ನು ಉತ್ತಮಗೊಳಿಸುತ್ತಾ ಹೋಗುತ್ತಾರೆ. ನಾವು ಅಸಾಧ್ಯ ಎಂದು ಭಾವಿಸಿದ್ದ ದಾಖಲೆಗಳನ್ನು ಅವರು ಸುಲಭದಲ್ಲಿ ಮುರಿಯುತ್ತಿದ್ದಾರೆ ಎಂದು ದ್ರಾವಿಡ್ ಹೊಗಳಿದ್ದಾರೆ.

Advertisement

ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 49 ಶತಕ ಬಾರಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದೇ ಜನ ಭಾವಿಸಿದ್ದರು. ಆದರೆ ಕೊಹ್ಲಿ ಈಗ ಈ ದಾಖಲೆಯಿಂದ ಕೇವಲ 8 ಶತಕಗಳ ಹಿಂದೆ ಇದ್ದಾರೆ. ಅವರು ಪ್ರತೀ ಪಂದ್ಯದಲ್ಲೂ ತನ್ನ ಪ್ರದರ್ಶನವನ್ನು ಉತ್ತಮಗೊಳಿಸುತ್ತಾರೆ ಎಂದು ದ್ರಾವಿಡ್ ಕೊಹ್ಲಿ ಬಗ್ಗೆ ಹೇಳಿದರು.

2014ರ ಇಂಗ್ಲೆಂಡ್ ಸರಣಿಯಲ್ಲಿ ಕೊಹ್ಲಿ ವೈಫಲ್ಯದ ಬಗ್ಗೆ ಮಾತನಾಡಿದ ದ್ರಾವಿಡ್, ಇಂಗ್ಲೆಂಡ್ ಸರಣಿ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ವಿರಾಟ್ ಪ್ರದರ್ಶನ ಅಷ್ಟೇನು ಉತ್ತಮವಾಗಿರಲಿಲ್ಲ. ಆದರೆ ಕೊಹ್ಲಿ ಮತ್ತೆ ಅದೇ ನೆಲಕ್ಕೆ ಸರಣಿಗೆ ಹೋದಾಗ ಅದ್ಭುತ ಪ್ರದರ್ಶನ ತೋರಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next