Advertisement

ಕೊನೆಗೂ ತೀರಿತು ವಿರಾಟ್ ಟೆಸ್ಟ್ ಶತಕದ ಬರ; ಆಸೀಸ್ ವಿರುದ್ಧ ಕೊಹ್ಲಿ ಅಬ್ಬರ

01:04 PM Mar 12, 2023 | Team Udayavani |

ಅಹಮದಾಬಾದ್: ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯ ಶತಕದ ಬರ ಕೊನೆಗೂ ನೀಗಿದೆ. ಟಿ20, ಏಕದಿನ ಕ್ರಿಕೆಟ್ ನಲ್ಲಿ ಫಾರ್ಮ್ ಗೆ ಮರಳಿ ಶತಕ ಸಿಡಿಸಿದ್ದ ವಿರಾಟ್ ಅಹಮದಾಬಾದ್ ನಲ್ಲಿ ಟೆಸ್ಟ್ ನಲ್ಲಿ ಶತಕ ಬಾರಿಸಿ ತಾನೇಕೆ ವಿಶ್ವಶ್ರೇಷ್ಠ ಬ್ಯಾಟರ್ ಎಂದು ತೋರಿಸಿದ್ದಾರೆ.

Advertisement

ಟೆಸ್ಟ್ ಕ್ರಿಕೆಟ್ ನ 28ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ ಶತಕದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದರು. ತನ್ನ ಕತ್ತಿನ ಸರದಲ್ಲಿದ ಉಂಗುರಕ್ಕೆ ಮುತ್ತಿಕ್ಕಿದ ವಿರಾಟ್ ಭಾವನಾತ್ಮಕವಾಗಿ ಸಂಭ್ರಮಾಚರಿಸಿದರು.

2019ರ ನವೆಂಬರ್ ಬಳಿಕ ವಿರಾಟ್ ಮೊದಲ ಶತಕ ಬಾರಿಸಿದರು. ಅಂದು ಬಾಂಗ್ಲಾ ವಿರುದ್ಧ ಶತಕ ಬಾರಿಸಿದ್ದ ವಿರಾಟ್, ಬರೋಬ್ಬರಿ 1205 ದಿನಗಳ ಬಳಿಕ ಟೆಸ್ಟ್ ಶತಕ ಹೊಡೆದರು. ಇದು ವಿರಾಟ್ ವೃತ್ತಿಜೀವನದ 75ನೇ ಅಂತಾರಾಷ್ಟ್ರೀಯ ಶತಕ.

ಇದನ್ನೂ ಓದಿ:ಗೊಂದಲದ ನಡುವೆ ವೇದಿಕೆಯಲ್ಲಿ ಕಾಣಿಸಿಕೊಂಡ ಸಚಿವ ನಾರಾಯಣಗೌಡ

ಈ ಶತಕ ಪೂರೈಸಲು ವಿರಾಟ್ ಬರೋಬ್ಬರಿ 241 ಎಸೆತ ಎದುರಿಸಿದರು. ಇದು ಅವರ ಎರಡನೇ ಅತ್ಯಂತ ನಿಧಾನಗತಿಯ ಶತಕವಾಗಿದೆ. ಪೂಜಾರ, ಜಡೇಜಾ ಮತ್ತು ಕೆಎಸ್ ಭರತ್ ಜೊತೆ ವಿರಾಟ್ ಅರ್ಧಶತಕದ ಜೊತೆಯಾಟವಾಡಿದರು.

Advertisement

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನ 480 ರನ್ ಗಳಿಗೆ ಉತ್ತರಿಸುತ್ತರುವ ಭಾರತ ತಂಡವು 143 ಓವರ್ ಗಳ ಬಳಿಕ ಐದು ವಿಕೆಟ್ ನಷ್ಟಕ್ಕೆ 412 ರನ್ ಮಾಡಿ ಸುಸ್ಥಿತಿಯಲ್ಲಿದೆ.

ಮೂರು ವಿಕೆಟ್ ಗೆ 289 ರನ್ ಗಳಿಸಿದ್ದಲ್ಲಿಂದ ಇಂದಿನ ದಿನದಾಟ ಆರಂಭಿಸಿದ ಭಾರತ ತಂಡವು ರವೀಂದ್ರ ಜಡೇಜಾ ಅವರ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. 28 ರನ್ ಗಳಿಸಿದ ಜಡೇಜಾ ಮರ್ಫಿ ಎಸೆತದಲ್ಲಿ ಔಟಾದರು. ಬಳಿಕ ವಿರಾಟ್ ಜೊತೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಎಸ್ ಭರತ್ 44 ರನ್ ಗಳ ಕಾಣಿಕೆ ನೀಡಿದರು. ಉತ್ತಮ ಡಿಫೆನ್ಸ್ ಮತ್ತು ಅಗ್ರೆಶನ್ ನ ಸಮತೋಲಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಭರತ್ ಮೂರು ಸಿಕ್ಸರ್ ಬಾರಿಸಿದರು.

ಬೆನ್ನು ನೋವಿನ ಕಾರಣದಿಂದ ಶ್ರೇಯಸ್ ಅವರು ಬ್ಯಾಟಿಂಗ್ ಗೆ ಇಳಿದಿಲ್ಲ. ಅವರು ಸ್ಕ್ಯಾನಿಂಗ್ ಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next