Advertisement

ಬಾರ್ಮಿ ಆರ್ಮಿಯಿಂದ ಕೊಹ್ಲಿಗೆ ವಾರ್ಷಿಕ ಕ್ರಿಕೆಟಿಗ ಪ್ರಶಸ್ತಿ

06:45 AM Jul 27, 2018 | Team Udayavani |

ಲಂಡನ್‌: ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿಗೆ ಇಂಗ್ಲೆಂಡ್‌ನ‌ ಬಾರ್ಮಿ ಆರ್ಮಿ ಫ್ಯಾನ್‌ ಕ್ಲಬ್‌ನಿಂದ ವಾರ್ಷಿಕ ಕ್ರಿಕೆಟಿಗ ಪ್ರಶಸ್ತಿ ನೀಡಲಾಗಿದೆ. ಈಗಾಗಲೇ ಕೊಹ್ಲಿ ಹಲವಾರು ದಾಖಲೆಗಳನ್ನು ಮಾಡಿ ನೂರಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಂತಹ ಸಾಧಕನ ಮುಕುಟಕ್ಕೆ ಮತ್ತೂಂದು ಗರಿ ಲಭಿಸಿದೆ. ಎಸ್ಸೆಕ್ಸ್‌ ತಂಡದ ವಿರುದ್ಧ ನಡೆದ ಅಭ್ಯಾಸ ಪಂದ್ಯದ ಮೊದಲ ದಿನದ ಆಟದ ಅಂತ್ಯದ ಬಳಿಕ ಬಾರ್ಮಿ ಆರ್ಮಿ ಕ್ಲಬ್‌ ವತಿಯಿಂದ ಪ್ರಶಸ್ತಿ ನೀಡಲಾಯಿತು. ಗೌರವವನ್ನು ಕೊಹ್ಲಿ ಮನಸಾರೆ ಸ್ವೀಕರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಪ್ರಕಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next