Advertisement

Virat Kohli ಜೆರ್ಸಿ ಸಂಖ್ಯೆ 18 ಯಾಕೆ? ಅದರ ಹಿಂದಿನ ಕಥೆ ಹೇಳಿದ ಆರ್ ಸಿಬಿ ಬ್ಯಾಟರ್

12:19 PM May 19, 2023 | Team Udayavani |

ಹೈದರಾಬಾದ್: ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ತಂಡಕ್ಕೆ ಅಗತ್ಯವಿರುವ ಸಮಯದಲ್ಲಿ ತನ್ನ ಅದ್ಭುತ ಬ್ಯಾಟಿಂಗ್ ನಿಂದ ನೆರವಾಗಿದ್ದಾರೆ. ಚೇಸ್ ಮಾಸ್ಟರ್ ಎಂದೇ ಹೆಸರಾದ ವಿರಾಟ್ ಗುರುವಾರ ಸನ್ ರೈರರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

Advertisement

ವಿರಾಟ್ ಕೊಹ್ಲಿ ಅಗಾಧ ಅಭಿಮಾನಿಗಳನ್ನು ಹೊಂದಿದ್ದಾರೆ. ಗುರುವಾರದ ಪಂದ್ಯ ಹೈದರಾಬಾದ್ ನಲ್ಲಿ ನಡೆದರೂ ಆರ್ ಸಿಬಿ ಮತ್ತು ವಿರಾಟ್ ಅಭಿಮಾನಿಗಳೇ ಹೆಚ್ಚಿದ್ದರು.

ವಿರಾಟ್ ಕೊಹ್ಲಿ ಅವರ ಜೆರ್ಸಿ ಸಂಖ್ಯೆ 18 ಆಗಿದೆ. ಈ ಸಂಖ್ಯೆಗೂ ವಿರಾಟ್ ಗೂ ವಿಶಿಷ್ಟ ಅನುಬಂಧವಿದೆ. ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ಮೊದಲು, ಕೊಹ್ಲಿ ತಮ್ಮ ಜೀವನದಲ್ಲಿ ನಂಬರ್ 18ರ ಪ್ರಾಮುಖ್ಯತೆಯನ್ನು ವಿವರಿಸಿದರು.

ಆರಂಭದಲ್ಲಿ 18 ತನಗೆ ನೀಡಲಾದ ಸಂಖ್ಯೆ ಎಂದು ಕೊಹ್ಲಿ ಹೇಳಿದರು, ಆದರೆ ನಂತರದ ದಿನಗಳಲ್ಲಿ ಈ ಸಂಖ್ಯೆಯು ಅವರ ಜೀವನದೊಂದಿಗೆ “ದೈವಿಕ ಸಂಪರ್ಕ” ವನ್ನು ಉಂಟು ಮಾಡಿದೆ ಎಂದರು.

“ನಿಹ ಹೇಳಬೇಕೆಂದರೆ, ಭಾರತದ U-19 ಜರ್ಸಿಯನ್ನು ಮೊದಲು ತೆರೆದಾಗ ನನಗೆ ಜೆರ್ಸಿ ಸಂಖ್ಯೆಯಾಗಿ 18 ನೀಡಲಾಗಿತ್ತು. ಆದರೆ ಅದು ನನ್ನ ಜೀವನದಲ್ಲಿ ಬಹಳ ಮುಖ್ಯವಾದ ಸಂಖ್ಯೆಯಾಗಿ ಮಾರ್ಪಾಡಾಯಿತು. ನಾನು ಆಗಸ್ಟ್ 18 ರಂದು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ. ನನ್ನ ತಂದೆ ಕೂಡ 2006ರ ಡಿಸೆಂಬರ್ 18ರಂದು ನಿಧನರಾದರು. ನನ್ನ ಜೀವನದ ಎರಡು ಮಹತ್ವದ ಕ್ಷಣಗಳು 18 ರಂದು ಸಂಭವಿಸಿದವು. ನನಗೆ ಈ ಸಂಖ್ಯೆ ಮೊದಲೇ ಸಿಕ್ಕಿದ್ದರೂ ಸಹ, ಅಲ್ಲಿ ಏನೋ ದೈವಿಕ ಕನೆಕ್ಷನ್ ಇದೆ ಎಂದು ತೋರುತ್ತದೆ” ಎಂದು ಸ್ಟಾರ್ ಸ್ಪೋರ್ಟ್ಸ್ ವೀಡಿಯೊದಲ್ಲಿ ಕೊಹ್ಲಿ ಹೇಳಿದ್ದಾರೆ.

Advertisement

ಅಭಿಮಾನಿಗಳು ವಿರಾಟ್ ಹೆಸರಿನ ಜೆರ್ಸಿ ಹಾಕಿದಾಗ ಸಂತಸವಾಗುತ್ತದೆ ಎಂದು ಹೇಳಿದರು. ನಾವು ಪಂದ್ಯಗಳಿಗೆ ಹೋದಾಗ ನನ್ನ ಜರ್ಸಿ ಸಂಖ್ಯೆ ಮತ್ತು ಹೆಸರನ್ನು ಧರಿಸಿರುವ ಜನರನ್ನು ನಾನು ನೋಡುವಾಗ ಖುಷಿಯಾಗುತ್ತದೆ. ಯಾಕೆಂದರೆ ಬಾಲ್ಯದಲ್ಲಿ ನಾನು ನನ್ನ ಹೀರೋಗಳ ಜರ್ಸಿಯನ್ನು ಧರಿಸಲು ಬಯಸಿದ್ದೆ. ಇದು ದೇವರು ನೀಡಿದ ಉತ್ತಮ ಅವಕಾಶವಾಗಿದೆ” ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next