Advertisement

ಸಿಡ್ನಿಯ ಬೇಬಿ ಶಾಪ್‌ನಲ್ಲಿ ಕೊಹ್ಲಿ, ಪಾಂಡ್ಯ ಶಾಪಿಂಗ್‌

10:30 PM Jan 03, 2021 | Team Udayavani |

ಹೊಸದಿಲ್ಲಿ: ರೋಹಿತ್‌ ಶರ್ಮ ಸೇರಿದಂತೆ ಭಾರತದ ಐವರು ಕ್ರಿಕೆಟಿಗರು ಮೆಲ್ಬರ್ನ್ ಹೊಟೇಲಿಗೆ ತೆರಳಿ ಕೋವಿಡ್‌ ನಿಯಮ ಉಲ್ಲಂಘಿಸಿದರೆಂಬುದು ಆಸ್ಟ್ರೇಲಿಯದ ಮಾಧ್ಯಮಗಳ ಪಾಲಿಗೆ ಮೃಷ್ಟಾನ್ನವಾಗಿ ಪರಿಣಮಿಸಿದೆ. ಹಾಗಾದರೆ ಇದಕ್ಕೂ ಮೊದಲು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸಿಡ್ನಿಯ “ಬೇಬಿ ಶಾಪ್‌’ ಒಂದಕ್ಕೆ ತೆರಳಿ ಶಾಪಿಂಗ್‌ ನಡೆಸಿದ್ದು ಇಲ್ಲಿನ ಮಾಧ್ಯಮಗಳ ಕಣ್ಣಿಗೆ ಬೀಳಲಿಲ್ಲವೇ ಎಂಬ ಪ್ರಶ್ನೆಯೊಂದು ಉದ್ಭವಿಸಿದೆ.

Advertisement

ಸಿಡ್ನಿಯಲ್ಲಿ ಟಿ20 ಸರಣಿ ಆಡುತ್ತಿದ್ದಾಗ ಈ ವಿದ್ಯಮಾನ ಸಂಭವಿಸಿದೆ. ಅಂತಿಮ ಪಂದ್ಯದ ಹಿಂದಿನ ದಿನ, ಅಂದರೆ ಡಿ. 7ರಂದು ಕೊಹ್ಲಿ ಮತ್ತು ಪಾಂಡ್ಯ ಒಟ್ಟಿಗೆ ಸಿಡ್ನಿಯ ಬೇಬಿ ಶಾಪ್‌ ಒಂದಕ್ಕೆ ಶಾಪಿಂಗ್‌ಗಾಗಿ ತೆರಳಿದ್ದರು. ಇಲ್ಲಿ ಕೊಹ್ಲಿ ಒಂದು ಬ್ಯಾಗ್‌ ಪೂರ್ತಿ ಬೊಂಬೆಗಳನ್ನು ಖರೀದಿಸಿದ್ದರು. ಪಾಂಡ್ಯ ಕೂಡ ಮಕ್ಕಳ ಆಟಿಕೆಗಳನ್ನು ಖರೀದಿಸಿದ್ದರು. ಬಳಿಕ ಅಲ್ಲಿನ ಮಹಿಳಾ ಸಿಬಂದಿಯೊಬ್ಬರ ಜತೆ ನಿಂತು ಫೋಟೊ ಕೂಡ ತೆಗೆಸಿಕೊಂಡಿದ್ದಾರೆ. ಆಗ ಯಾರೂ ಮಾಸ್ಕ್ ಧರಿಸಿರಲಿಲ್ಲ. ಇದರ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ:ಮಣಿಪುರ ಕಾಡ್ಗಿಚ್ಚಿಗೆ 200ಎಕರೆ ಅರಣ್ಯ ಸುಟ್ಟು ಕರಕಲು :ಪ್ರಗತಿಯಲ್ಲಿ ಬೆಂಕಿ ನಂದಿಸುವ ಕಾರ್ಯ

ಹಾಗಾದರೆ ಇದು ಕೋವಿಡ್‌ ನಿಯಮದ ಉಲ್ಲಂಘನೆಯಲ್ಲವೇ? ಇದು ಆಸ್ಟ್ರೇಲಿಯದ ಮಾಧ್ಯಮಗಳಿಗೆ ಕಾಣಲಿಲ್ಲವೇಕೆ? ಅಂದು ಇವರ ವಿರುದ್ಧ ಸುಮ್ಮನಿದ್ದವರು ಈಗ ಉಳಿದವರ ಮೇಲೇಕೆ ಹಾರಾಡುತ್ತಿದ್ದಾರೆ ಎಂದು ಈ ಚಿತ್ರವನ್ನು ಕಂಡವರು ಪ್ರಶ್ನಿಸುತ್ತಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next