Advertisement

ತಂತ್ರಗಾರಿಕೆ ಫ‌ಲಿಸಿತು: ಕೊಹ್ಲಿ

06:25 AM Jan 29, 2018 | Team Udayavani |

ಜೊಹಾನ್ಸ್‌ಬರ್ಗ್‌: ಇತರರು ನಮ್ಮನ್ನು ಅನುಮಾನಿಸಿದರು. ಆದರೆ ನಾವು ನಂಬಿದ ತಂತ್ರಗಾರಿಕೆ ತೃತೀಯ ಟೆಸ್ಟ್‌ ನಲ್ಲಿ  ನಮ್ಮ ಕೈಹಿಡಿಯಿತು. ಹಿಂಜರಿಯಲಾರೆವು ಎಂಬ ನಮ್ಮ ನಂಬಿಕೆ ಕೊನೆಯ ಪಂದ್ಯದಲ್ಲಿ ಸಕಾರಾತ್ಮಕ ಫ‌ಲಿತಾಂಶ ಕೊಟ್ಟಿತು’ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹೇಳಿದರು.

Advertisement

ದಕ್ಷಿಣ ಆಫ್ರಿಕಾ ವಿರುದ್ಧ  3ನೇ ಟೆಸ್ಟ್‌ ಪಂದ್ಯವನ್ನು 63 ರನ್‌ಗಳಿಂದ ಗೆದ್ದ ಬಳಿಕ ಮಾತಾಡಿದ ಕೊಹ್ಲಿ. “ಹೆಚ್ಚಿನವರಿಗೆ ನಮ್ಮ ಮೇಲೆ ನಂಬಿಕೆಯಿಲ್ಲ. ಆದರೆ ಮೊದಲೆರಡು ಪಂದ್ಯಗಳಲ್ಲೂ ನಾವು ಗೆಲುವಿಗೆ ಸಮೀಪದಲ್ಲಿದ್ದೆವು. ಅಂಥ ಒತ್ತಡದ ಸಂದರ್ಭಗಳಲ್ಲಿ ನಾವು ಆಫ್ರಿಕನ್ನರಿಗಿಂತಲೂ ಚೆನ್ನಾಗಿ ಆಡುತ್ತಿದ್ದರೆ ಪಂದ್ಯ ಗೆಲ್ಲುತ್ತಿದ್ದೆವು. ನಾವದನ್ನು ಕೊನೆಯ ಪಂದ್ಯದಲ್ಲಿ ನಿರೂಪಿಸಿದ್ದೇವೆ’ ಎಂದರು.

ಮೂರನೇ ಟೆಸ್ಟ್‌ ಗೆಲುವು ತಂಡದ ದೃಷ್ಟಿಯಿಂದ ಪ್ರಮುಖವಾದುದು. ನಾವೀ ಪಂದ್ಯವನ್ನು ಗೆಲ್ಲಲು ನಿರ್ಧರಿಸಿದ್ದೆವು. ಸರಣಿ ಸೋಲಿನ ಹೊರತಾಗಿಯೂ ನಾವು ನಮ್ಮ ನಂಬಿಕೆ ಕಳೆದುಕೊಳ್ಳದೆ ನಮ್ಮನ್ನು ನಾವು ಗಟ್ಟಿಗೊಳಿಸಿಕೊಂಡಿದ್ದೇವೆ ಎಂದು ಕೊಹ್ಲಿ ಹೇಳಿದರು.

ಪಂದ್ಯದ ಹೊರಗೆ ಕೂತು ಮಾತನಾಡುವವರಂತೆ ನಾವು ಯೋಚಿಸುವುದಿಲ್ಲ. ನಾವು ಅಂದುಕೊಂಡಂತೆ ನಡೆಯದಿದ್ದರೆ ನಾವು ಅವರಿವರನ್ನು ದೂರಬಹುದು. ದೂರುವುದು ತುಂಬಾ ಸುಲಭ. ನಾನು ಯಾರ ಬಗ್ಗೆಯೂ ಏನನ್ನಾದರೂ ಹೇಳಿಬಿಡಬಹುದು. ಆದರೆ ನಾನು ಯಾರನ್ನೂ ದೂರಲು ಹೋಗುವುದಿಲ್ಲ ಎಂದು ಕೊಹ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next