ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅನಗತ್ಯ ಪಟ್ಟಿಯೊಂದಕ್ಕೆ ಸೇರಿದ್ದಾರೆ. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ವಿರಾಟ್ ಇಂದು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
12ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಕೇಶವ್ ಮಹಾರಾಜ್ ಎಸೆತದಲ್ಲಿ ಬವುಮಾಗೆ ಕ್ಯಾಚ್ ನೀಡಿ ವಿರಾಟ್ ಕೊಹ್ಲಿ ಔಟಾದರು. ಐದು ಎಸೆತ ಎದುರಿಸಿದ್ದ ವಿರಾಟ್ ಯಾವುದೇ ರನ್ ಗಳಿಸದೆ ಔಟಾಗಿ ನಿರಾಶೆ ಮೂಡಿಸಿದರು.
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 14 ನೇ ಬಾರಿಗೆ ಡಕ್ ಔಟಾದರು, ಅಲ್ಲದೆ ಏಕದಿನ ಮಾದರಿಯಲ್ಲಿ ವಿರಾಟ್ ಮೊದಲ ಬಾರಿ ಸ್ಪಿನ್ ಬೌಲಿಂಗ್ ನಲ್ಲಿ ಡಕೌಟಾದರು.
ಶುಕ್ರವಾರದ ಡಕ್‌ನೊಂದಿಗೆ, ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶೂನ್ಯ ಗಳಿಕೆ ಮಾಡಿದ ಭಾರತದ ಬ್ಯಾಟರ್ ಗಳ ಅನಗತ್ಯ ಪಟ್ಟಿಯಲ್ಲಿ ಮಾಜಿ ನಾಯಕ ಮತ್ತು ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಕಪಿಲ್ ದೇವ್ ಅವರನ್ನು ಹಿಂದಿಕ್ಕಿದರು.
Related Articles
ಇದನ್ನೂ ಓದಿ:ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಅಮೆಜಾನ್ ಪ್ರೈಮ್
ವಿರಾಟ್ ಕೊಹ್ಲಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕವಿಲ್ಲದೆ 64 ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಶೂನ್ಯಕ್ಕೆ ಔಟಾಗಿರುವುದು ಇದು 7 ನೇ ಬಾರಿ.
ಏಕದಿನ ಕ್ರಿಕೆಟ್ ನಲ್ಲಿ ಹೆಚ್ಚು ಡಕೌಟ್
ಸಚಿನ್ ತೆಂಡೂಲ್ಕರ್ – 20
ಜಾವಗಲ್ ಶ್ರೀನಾಥ್ – ೧9
ಅನಿಲ್ ಕುಂಬ್ಳೆ – 18
ಯುವರಾಜ್ ಸಿಂಗ್ – 18
ಹರ್ಭಜನ್ ಸಿಂಗ್ – 17
ಸೌರವ್ ಗಂಗೂಲಿ – 16
ಜಹೀರ್ ಖಾನ್ – 14
ವಿರಾಟ್ ಕೊಹ್ಲಿ – 14
ಸುರೇಶ್ ರೈನಾ – 14
ವೀರೇಂದ್ರ ಸೆಹ್ವಾಗ್ – 14
ರಾಹುಲ್ ದ್ರಾವಿಡ್ – 13
ಕಪಿಲ್ ದೇವ್ – 13