Advertisement

Ranaji Trophy: ಕೊಹ್ಲಿ ಸೇರಿದಂತೆ 84 ಸಂಭಾವ್ಯ ಆಟಗಾರರು!

10:30 PM Sep 25, 2024 | Team Udayavani |

ಹೊಸದಿಲ್ಲಿ: ಮುಂಬರುವ ರಣಜಿ ಟ್ರೋಫಿ ಪಂದ್ಯಾವಳಿಗಾಗಿ ದಿಲ್ಲಿ 84 ಸಂಭಾವ್ಯ ಕ್ರಿಕೆಟಿಗರ ಜಂಬೋ ಯಾದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಟೀಮ್‌ ಇಂಡಿಯಾದ ತಾರಾ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಕೂಡ ಇದ್ದಾರೆ.

Advertisement

ವಿರಾಟ್‌ ಕೊಹ್ಲಿ ಈ ಯಾದಿಯಲ್ಲಿದ್ದರೂ ರಣಜಿ ಆಡುವ ಯಾವುದೇ ಸಾಧ್ಯತೆ ಇಲ್ಲ. ಅವರು ಕೊನೆಯ ಸಲ ರಣಜಿ ಪಂದ್ಯ ವಾಡಿದ್ದು 2012ರಲ್ಲಿ. ಉ.ಪ್ರ. ವಿರುದ್ಧದ ಈ ಪಂದ್ಯ ಗಾಜಿಯಾಬಾದ್‌ನಲ್ಲಿ ನಡೆದಿತ್ತು.

“ಇದೊಂದು ಶಿಷ್ಟಾಚಾರ. ಇವರೆಲ್ಲ ನಮ್ಮ ಅಧಿಕೃತ ಆಟಗಾರರು. ಇವರ ಹೆಸರನ್ನು ಸಂಭಾವ್ಯರ ಯಾದಿಯಲ್ಲಿ ಪ್ರಕಟಿಸುವುದು ನಮ್ಮ ಕರ್ತವ್ಯ’ ಎಂಬುದಾಗಿ ಡಿಡಿಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದ ಅತೀ ವೇಗದ ಬೌಲರ್‌ ಮಾಯಾಂಕ್‌ ಯಾದವ್‌, ಸಂಸತ್‌ ಸದಸ್ಯ ಪಪ್ಪು ಯಾದವ್‌ ಅವರ ಪುತ್ರ ಸಾರ್ಥಕ್‌ ರಂಜನ್‌ ಸಂಭಾವ್ಯರ ಯಾದಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next