ದಿನ ಬೆಳಗಾದರೆ ಮೊಬೈಲ್ ಗಳಲ್ಲಿ ವೈರಲ್ ವಿಡಿಯೋಗಳದ್ದೇ ಸದ್ದು, ಎಲ್ಲವೂ ಒಂದಕ್ಕಿಂತ ಇನ್ನೊಂದು ಅದ್ಬುತ, ಹಾಸ್ಯಾಸ್ಪದ, ಇನ್ನೂ ಕೆಲವು ಜೀವಕ್ಕೆ ಅಪಾಯಕಾರಿಯಾಗಿರುತ್ತೆ.
ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಯ ವಿಡಿಯೊಗಳೇ ಸಾಲು ಸಾಲು ಕಾಣಸಿಗುತ್ತದೆ, ಅದರಲ್ಲೂ ಕೆಲವೊಂದು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಅದರಂತೆ ಟ್ವಿಟರ್ ನಲ್ಲೊಂದು ಹರಿದಾಡುವ ವಿಡಿಯೋ ನಮ್ಮನ್ನೇ ಒಮ್ಮೆ ದಂಗಾಗಿಸುತ್ತೆ, ಹೀಗೂ ಇದೆಯಾ ಎಂಬಂತೆ ಭಾಸವಾಗುತ್ತದೆ, ಇಲ್ಲಿ ಒಂದು ಬೈಕಿನಲ್ಲಿ ಸಾಮಾನ್ಯವಾಗಿ ಇಬ್ಬರು ಮಕ್ಕಳು ಸೇರಿದರೆ ಮೂರು ಅಥವಾ ನಾಲ್ಕು ಮಂದಿ ಅದೂ ಕಷ್ಟದಲ್ಲಿ ಪ್ರಯಾಣಿಸಬಹುದು, ಆದರೆ ಇಲ್ಲೊಂದು ಕಡೆ ಒಂದು ಬೈಕಿನಲ್ಲಿ ಮಕ್ಕಳು ಸೇರಿ ಆರು ಮಂದಿ ಪ್ರಯಾಣಿಸುತ್ತಿದ್ದಾರೆ, ಅಷ್ಟೇ ಅಲ್ಲದೆ ಎರಡು ನಾಯಿಗಳು ಜೊತೆಗೆ ಎರಡು ಕೋಳಿಗಳು ಬೈಕ್ ಮೇಲೆ ಪ್ರಯಾಣಿಸುತ್ತಿವೆ.
ಟ್ವಿಟರ್ ನಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಒಂದು ವೇಳೆ ಈತನ ಗ್ರಹಚಾರಕ್ಕೆ ಟ್ರಾಫಿಕ್ ಪೊಲೀಸ್ ಎದುರಾದರೆ ಈತನಿಗೆ ಅದೆಷ್ಟು ದಂಡ ಹಾಕಬಹುದು.
Related Articles
ಈ ವಿಡಿಯೋ ಟ್ವಿಟರ್ ನಲ್ಲಿ ಸಾಕಷ್ಟು ವೈರಲ್ ಆಗಿದ್ದು ಕೆಲವೊಂದಷ್ಟು ಮಂದಿ ಈತನ ಹುಚ್ಚು ಸಾಹಸಕ್ಕೆ ಗರಂ ಆದರೆ, ಇನ್ನೂ ಕೆಲವರು ಬೈಕ್ ಮಾಲೀಕನಿಗೆ ದಂಡ ವಿಧಿಸಬೇಕೆಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದೇಶದ ಅತೀ ದೊಡ್ಡ ಕುಡಿಯುವ ನೀರಿನ ಕಂಪನಿ ಟಾಟಾ ತೆಕ್ಕೆಗೆ? ಅಧ್ಯಕ್ಷ ಚೌಹಾಣ್ ಪ್ರತಿಕ್ರಿಯೆ ಏನು…