ನವದೆಹಲಿ: ಸಾಮಾಜಿಕ ಜಾಲತಾಣವು ಕೇವಲ ಒಂದು ವೀಡಿಯೊದಿಂದ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಅಂತಹ ಒಂದು ಒಳ್ಳೆಯ ಸ್ಪೂರ್ತಿದಾಯಕ ವಿಡಿಯೋಕ್ಕೆ ಉತ್ತಮ ಉದಾಹರಣೆ ಇದು.
ಸುಮಾರು ನಾಲ್ಕು ವರ್ಷಗಳ ಹಿಂದೆ 56 ವರ್ಷದ ಮಹಿಳೆಯೊಬ್ಬರು ತೀವ್ರ ಮೊಣಕಾಲು ಮತ್ತು ಕಾಲು ನೋವನ್ನು ಅನುಭವಿಸುತ್ತಿದ್ದರು. ತನ್ನದೇ ಜಿಮ್ ಹೊಂದಿರುವ ಆಕೆಯ ಮಗ, ಚಿಕಿತ್ಸೆಗಳ ಬಗ್ಗೆ ವ್ಯಾಪಕವಾದ ಅಧ್ಯಯನವನ್ನು ಮಾಡಿ ತನ್ನ ತಾಯಿ ದಿನಾ ಯಾವ ರೀತಿಯ ವ್ಯಾಯಾಮ ಮಾಡಬೇಕು ಎಂದು ತೀರ್ಮಾನಿಸಿ, ತಾಯಿಗೆ ವ್ಯಾಯಾಮ ಮಾಡಲು ತಿಳಿಸಿದ್ದ.
ಅಂದಿನಿಂದ ಮಗನ ಸೂಚನೆಯಂತೆ ಅವರು ತನ್ನ ವ್ಯಾಯಾಮ ಶುರು ಮಾಡಿಕೊಂಡರು. ಕೆಲ ದಿನಗಳ ನಂತರ ತನ್ನ ಸೊಸೆಯೊಂದಿಗೆ ವರ್ಕ್ಔಟ್ ಮಾಡಲು ಪ್ರಾರಂಭಿಸಿದರು, ವೇಟ್ಲಿಫ್ಟಿಂಗ್ ಮತ್ತು ಪವರ್ಲಿಫ್ಟಿಂಗ್ ಅಭ್ಯಸಿಸಿದರು, ಇದು ಅವರ ದೈಹಿಕ ಅಸ್ವಸ್ಥತೆಯನ್ನು ಮತ್ತು ನೋವನ್ನು ನಿವಾರಿಸಿ ಅವರನ್ನು ಆರೋಗ್ಯವಂತರನ್ನಾಗಿರಿಸಿದೆ . ಅಂದಿನಿಂದ ಅವರ ಅದ್ಭುತ ಅನುಭವಗಳನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು, ಇದು ಈಗ ಎಲ್ಲೆಡೆ ವೈರಲ್ ಆಗುತ್ತಿವೆ.
Related Articles
ಇವರ ಸ್ಪೂರ್ತಿದಾಯಕ ಕಥೆಯನ್ನು ಇನ್ಸ್ಟಾಗ್ರಾಮ್ನಲ್ಲಿ “ಹ್ಯೂಮನ್ಸ್ ಆಫ್ ಮದ್ರಾಸ್” ಮತ್ತು “ಮದ್ರಾಸ್ ಬಾರ್ಬೆಲ್” ಜಂಟಿಯಾಗಿ ಹಂಚಿಕೊಂಡಿದ್ದಾರೆ. ಪ್ರತಿದಿನ ತಮ್ಮ ಫಿಟ್ನೆಸ್ ಅನ್ನು ಉಳಿಸಿಕೊಳ್ಳಲು ಯೋಚಿಸುವ ಸಾವಿರಾರು ಜನರಿಗೆ ಅವರು ಈಗ ಸ್ಫೂರ್ತಿಯಾಗಿದ್ದಾರೆ.ಅದೇ ವೀಡಿಯೊವನ್ನು ಹ್ಯೂಮನ್ಸ್ ಆಫ್ ಮದ್ರಾಸ್ ಸಹ ಕೆಳಗಿನ ಪೋಸ್ಟ್ನಲ್ಲಿ ಮಹಿಳೆಯ ಕುರಿತು ಕೆಲವು ಹೆಚ್ಚುವರಿ ವಿವರಗಳೊಂದಿಗೆ ಹಂಚಿಕೊಂಡಿದೆ.