Advertisement

ಅಮೆರಿಕ ನಾಗರಿಕನ ತಮಿಳು ಪ್ರೀತಿಗೆ ಫಿದಾ ಆದ ರೆಸ್ಟೋರೆಂಟ್ ಮಾಲೀಕ !

09:46 AM Jun 08, 2022 | Team Udayavani |

ನ್ಯೂಯಾರ್ಕ್‌ : ತಾಯ್ನಾಡಿನಲ್ಲೇ ಇದ್ದುಕೊಂಡು ಮಾತೃಭಾಷೆ ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡುವವರಿರುತ್ತಾರೆ. ಹೀಗಿರುವಾಗ ಅಮೆರಿಕದ ಈ ವ್ಯಕ್ತಿ ತಮಿಳು ಭಾಷೆಯ ಮೇಲಿನ ಪ್ರೀತಿಯಿಂದಾಗಿ ಎಲ್ಲೆಡೆ ಸುದ್ದಿಯಾಗಿದ್ದಾನೆ.

Advertisement

ಕ್ಸಿಯೋಮನಿಕ್‌ ಹೆಸರಿನ ವ್ಯಕ್ತಿ ನ್ಯೂಯಾರ್ಕ್‌ನ ತಮಿಳು ರೆಸ್ಟೋರೆಂಟ್‌ ಒಂದಕ್ಕೆ ಹೋಗಿದ್ದಾರೆ. ಅಲ್ಲಿ ಆತ ರೆಸ್ಟೋರೆಂಟ್‌ ಮಾಲೀಕನೊಂದಿಗೆ ತಮಿಳಿನಲ್ಲೇ ಮಾತನಾಡಿದ್ದು, ತನಗೆ ಬೇಕಾದ ತಿನಿಸು ಆರ್ಡರ್‌ ಮಾಡಿದ್ದಾರೆ. ಅವರ ತಮಿಳು ಪ್ರೀತಿ ಕಂಡು ಮಾಲೀಕ ಅವರಿಂದ ಹಣವನ್ನೂ ಸ್ವೀಕರಿಸಿಲ್ಲ.

ಈ ವಿಡಿಯೋವನ್ನು ಕ್ಸಿಯೋಮನಿಕ್‌ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. “ದೀರ್ಘ‌ ಇತಿಹಾಸ ಹೊಂದಿರುವ ತಮಿಳನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮಾತಾಡುತ್ತಾರೆ. ನನಗೆ ಈ ಭಾಷೆಯೆಂದರೆ ಎಲ್ಲಿಲ್ಲದ ಪ್ರೀತಿ. ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಅದೇ ಭಾಷೆಯನ್ನು ಮಾತಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next