Advertisement

Ishq in Road: ಸ್ಕೂಟರ್‌ ನಲ್ಲಿ ಅಪ್ಪಿಕೊಂಡು, ಮುದ್ದಾಡಿದ ಜೋಡಿ; ವಿಡಿಯೋ ವೈರಲ್

02:10 PM May 16, 2023 | Team Udayavani |

ದೆಹಲಿ: ದಿಲ್ಲಿ ಮೆಟ್ರೋದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜೋಡಿಯೊಂದು ಲಿಪ್‌ ಲಾಕ್‌ ಮಾಡಿದ ವಿಡಿಯೋ ವೈರಲ್‌ ಆಗಿತ್ತು. ಇದೀಗ ದಿಲ್ಲಿ ಮತ್ತೊಂದು ಅಂಥದ್ದೇ ವಿಚಾರದಲ್ಲಿ ಸುದ್ದಿಯಾಗಿದೆ. ಆದರೆ ಈ ಬಾರಿ ಸ್ಕೂಟರ್‌ ನಲ್ಲಿ ಪ್ರಯಾಣಿಸಿದ ಜೋಡಿಯಿಂದಾಗಿ.

Advertisement

ದಿಲ್ಲಿಯ ರಸ್ತೆಯಲ್ಲಿ ಸ್ಕೂಟರ್‌ ನಲ್ಲಿ ಜೋಡಿಯೊಂದು ಹೋಗುವಾಗ ಹುಡುಗ ಒಂದು ಕೈಯಲ್ಲಿ ಸ್ಕೂಟರ್‌ ಚಲಾಯಿಸುತ್ತ ಇನ್ನೊಂದು ಕೈಯಲ್ಲಿ ಯುವತಿಯನ್ನು ಅಪ್ಪಿಕೊಂಡು ಮುದ್ದಾಡಿದ್ದಾನೆ. ಈ ವಿಡಿಯೋವನ್ನು ಕಾರಿನಲ್ಲಿ ಹೋಗುತ್ತಿದ್ದವರು ಸೆರೆ ಹಿಡಿದ್ದಾರೆ.

ಶಾಲು ಕಶ್ಯಪ್ ತನೇಜಾ ಎನ್ನುವವರು ವಿಡಿಯೋ ಶೇರ್‌ ಮಾಡಿದ್ದು, ಈಗಾಗಲೇ ವಿಡಿಯೊ 6 ಮಿಲಿಯನ್‌ ಗೂ ಹೆಚ್ಚಿನ ವೀಕ್ಷಣೆ ಕಂಡು ವೈರಲ್‌ ಆಗಿದೆ.

“ಯಮರಾಜ ಹಾಗೂ ದಿಲ್ಲಿ ಪೊಲೀಸರು ರಜೆಯಲ್ಲಿದ್ದಾಗ ಪ್ರೀತಿ ಈ ರೀತಿ ಅರಳುತ್ತದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. “ಇಬ್ಬರ ಪ್ರೀತಿಯನ್ನು ನಮ್ಮ ಸಮಾಜ ನೋಡುವುದಿಲ್ಲ ಯಾಕೆ?” ಎಂದು ತಮಾಷೆಯಾಗಿ ಕಮೆಂಟ್‌ ಮಾಡಿದ್ದಾರೆ.

ಸದ್ಯ ಪೊಲೀಸರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Advertisement

Advertisement

Udayavani is now on Telegram. Click here to join our channel and stay updated with the latest news.

Next