Advertisement

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಅಪ್ಪ-ಮಗನ ವಿಡಿಯೋ….

07:00 PM Nov 27, 2022 | Team Udayavani |

ಮಕ್ಕಳ ಜತೆಗೆ ಹೆತ್ತವರು ಹಲವು ರೀತಿಯ ಆಟಗಳನ್ನು ಆಡುತ್ತಾರೆ. ಕೆಲವೊಮ್ಮೆ ಅದು ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇನ್ನೊಮ್ಮೆ ಟೀಕೆಗೆ ಕೂಡ ಒಳಗಾಗಿದೆ.

Advertisement

ಟ್ವಿಟರ್‌ನಲ್ಲಿ ಗುಲ್ಜಾರ್‌ ಸಾಹೇಬ್‌ ಎಂಬುವರು ಅಪ್‌ಲೋಡ್‌ ಮಾಡಿದ ವೀಡಿಯೊ ಒಂದರಲ್ಲಿ ತಂದೆ ಮಗನನ್ನು ಎತ್ತರಕ್ಕೆ ಹಾರಿಸಿ ಹಿಡಿದುಕೊಳ್ಳುತ್ತಾನೆ. ಒಟ್ಟು ಮೂವತ್ತೆರಡು ಸೆಕೆಂಡ್‌ಗಳ ಕಾಲ ಇರುವ ಈ ವಿಡಿಯೋದ ಒಂದು ಭಾಗದಲ್ಲಿ ಆತ ಪುತ್ರನನ್ನು ಒಂದೇ ಕೈಯಿಂದ ಹಿಡಿಯುವ ಸಾಹಸ ಮಾಡುತ್ತಾನೆ. ಅದನ್ನು 3.78 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.


ಏಳು ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. ಪುಟ್ಟ ಮಗು ವಿಡಿಯೋದಲ್ಲಿ ಅಪ್ಪನ ಸಾಹಸದ ಜತೆಗೆ ಎಂಜಾಯ್‌ ಮಾಡಿದರೂ, ಕೆಲವು ಮಂದಿ ವ್ಯಕ್ತಿಯ ಸಾಹಸಕ್ಕೆ ಆಕ್ಷೇಪ ಮಾಡಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next