Advertisement

ವಿಡಿಯೋ: ತಲೆಯ ಮೇಲೆ ಬೈಕ್‌ ಹೊತ್ತುಕೊಂಡು ಸಾಗಿದ ವ್ಯಕ್ತಿ; ಇವರೇ ರಿಯಲ್‌ ಬಾಹುಬಲಿ ಎಂದ ನೆಟ್ಟಿಗರು

01:04 PM Nov 26, 2022 | Team Udayavani |

ನವದೆಹಲಿ: ನಮಗೆ ಹೆಚ್ಚು ಸಮಯ ಕೈಯಲ್ಲಿ ಭಾರವಾದ ವಸ್ತುಗಳನ್ನು ಹಿಡಿದುಕೊಂಡು ಹೋಗಲು ಕಷ್ಟವಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಭಾರವಾಗಿದ್ದನ್ನು ತನ್ನ ತಲೆಯ ಮೇಲೆಯೇ ಇಟ್ಟುಕೊಂಡು ಗಮನ ಸೆಳೆದಿದ್ದಾನೆ.

Advertisement

ಸಾಮಾನ್ಯವಾಗಿ ಮಹಿಳೆಯರು ಅಥವಾ ಕಾರ್ಮಿಕರು ಮೀನಿನ ಬುಟ್ಟಿಯನ್ನೋ, ಸಿಮೆಂಟಿನ ಚೀಲವನ್ನೋ ತಲೆಯ ಮೇಲೆ ಇಟ್ಟುಕೊಂಡು ಹೋಗುವುದನ್ನು ನೋಡಿದ್ದೇವೆ. ಅಲ್ಪ ಸ್ವಲ್ಪ ಆಚೆ ಇಚೆ ಆದರೂ ಬೀಳುವುದು ಖಚಿತ. ಟ್ವಟರ್‌ ಬಳಕೆದಾರರೊಬ್ಬರು ವ್ಯಕ್ತಿಯೊಬ್ಬ ತಲೆಯ ಮೇಲೆ ಬೈಕ್‌ ನ್ನು ಎತ್ತಿಕೊಂಡು ಬಸ್ಸಿನ ಮೇಲೆ ಹಾಕುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಗುಲ್ಜಾರ್ ಸಾಹಬ್ ಎನ್ನುವವರು ನ.25 ( ಶುಕ್ರವಾರ) ಟ್ವಟರ್‌ ನಲ್ಲಿ ವ್ಯಕ್ತಿಯೊಬ್ಬ ತನ್ನ ತಲೆಗೆ ಮುಂಡಾಸು ರೀತಿಯ ಬಟ್ಟೆ ಕಟ್ಟಿಕೊಂಡು ಭಾರವಾದ ಬೈಕೊಂದನ್ನು ಎತ್ತಿಕೊಂಡು  ಏಣಿಯ ಮೇಲೆ ಹತ್ತಿ ಬಸ್ಸಿನ ಮೇಲೆ ಇಡುವ ವಿಡಿಯೋವನ್ನು ಹಂಚಿಕೊಂಡು ಇವರು ನಿಜಕ್ಕೂ ಸೂಪರ್‌ ಹ್ಯೂಮನ್‌ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ಈ ದೃಶ್ಯ ಎಲ್ಲಿಯದು ಎಂಬುವುದು ತಿಳಿದಿಲ್ಲ. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. 88 ಸಾವಿರ ವೀಕ್ಷಣೆಯಾಗಿದ್ದು, 5.8 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ.

ಟ್ವಟರ್‌ ಬಳಕೆದಾರರೊಬ್ಬರು, “ನನಗೆ ಇವರ ರೀತಿಯ ಕುತ್ತಿಗೆಯ ಶಕ್ತಿಬೇಕೆಂದಿದ್ದಾರೆ. ಮತ್ತೊಬ್ಬರು ಇವರು ರಿಯಲ್‌ ಬಾಹುಬಲಿ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next