ಭಾರತೀಯ ಹಾಡುಗಳಿಗೆ ವಿದೇಶಿಗರು ಡಾನ್ಸ್ ಮಾಡುವ, ಲಿಪ್ ಸಿಂಕ್ ಮಾಡುವ ಹಲವಾರು ವಿಡಿಯೋಗಳು ಜಾಲತಾಣದಲ್ಲಿ ಪದೇ ಪದೆ ವೈರಲ್ ಆಗುತ್ತಲೇ ಇರುತ್ತವೆ. ಭಾಷೆ ಗೊತ್ತಿಲ್ಲದಿದ್ದರೂ, ಭಾರತೀಯ ಸಿನಿಮಾಗಳ ಹಾಡುಗಳನ್ನು ಗುನಗುತ್ತಾ ನಟಿಸಿ, ಸೈ ಎನಿಸಿಕೊಂಡ ವಿದೇಶಿಗರು ಇದ್ದಾರೆ. ಅದೇ ರೀತಿಯ ವಿಡಿಯೋ ಒಂದು ಈಗ ವೈರಲ್ ಆಗಿದೆ. ಆದರೆ ಇಲ್ಲಿ ನೋಡುಗರ ಮನಕದ್ದಿರೋದು ಚೀನದ ಪುಟ್ಟ ಪೋರ.
ಹೌದು, ಶಾರುಖ್ ಅಭಿನಯದ “ಮೊಹಬ್ಬತೇನ್’ ಸಿನಿಮಾದ “ಆಂಖೇ ಖುಲೀ ಹೋ ಯಾ ಹೋ ಬಂದ್’ ಹಾಡಿಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಚೀನದ ಮಗುವೊಂದು ಡಾನ್ಸ್ ಮಾಡಿರುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.
ಆತನ ಎಕ್ಸ್‌ಪ್ರೆಶೆನ್ಸ್, ಡಾನ್ಸ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಹಲವರು “ಈ ಪೋರನನ್ನು ಭಾರತಕ್ಕೆ ಪಾರ್ಸೆಲ್ ಮಾಡಿ’ ಎಂದು ಮುದ್ದಿಸಿದರೆ, ಮತ್ತೂ ಹಲವರು “ಈತ ಥೇಟ್ ಜೂನಿಯರ್ ಶಾರುಖ್’ ಎಂದು ಕಮೆಂಟಿಸಿದ್ದಾರೆ.
Related Articles