Advertisement

ಶಾಲೆಗೆ ಹೊರಟು ಕುಳಿತ ಶ್ವಾನಗಳು….ಸ್ಕೂಲ್‌ ಬಸ್‌ ಎಲ್ಲೋಯ್ತು?-ವಿಡಿಯೋ ವೈರಲ್‌

10:41 PM Oct 02, 2022 | Team Udayavani |

ನಾಯಿಗಳ ಮುದ್ದಾದ ವಿಡಿಯೋ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತದೆ. ಅಂತದ್ದೇ ಒಂದು ಮುದ್ದಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ. ಹತ್ತು ಬೇರೆ ಬೇರೆ ತಳಿಯ ನಾಯಿಗಳು ಒಂದೆಡೆ ಕುಳಿತಿವೆ. ಬಣ್ಣ ಬಣ್ಣದ ಬ್ಯಾಗ್‌ಗಳನ್ನು ಹಾಕಿಕೊಂಡು ಬಾಗಿಲ ಬಳಿಯೇ ಶಿಸ್ತಿನಿಂದ ಕುಳಿತಿರುವ ಅವುಗಳ ಕುತ್ತಿಗೆಗೆ ಹಳದಿ ಬಣ್ಣದ ಕರವಸ್ತ್ರವನ್ನೂ ಕಟ್ಟಲಾಗಿದೆ.

Advertisement

ಈ ನಾಯಿಗಳು ಶಾಲೆಗೆ ಹೋಗುವುದಕ್ಕಾಗಿ ಬಸ್ಸು ಕಾಯುತ್ತಿವೆ ಎಂದು ಟ್ವಿಟರ್‌ನಲ್ಲಿ ಕ್ಯಾಪ್ಶನ್‌ ಕೊಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

“ನಾಯಿಗಳೆಂದರೆ ಇಷ್ಟು ಶಿಸ್ತಾಗಿರಬೇಕು’ ಎಂದು ಅನೇಕರು ಕಾಮೆಂಟ್‌ ಮಾಡಲಾರಂಭಿಸಿದ್ದಾರೆ. ಈ ವಿಡಿಯೋವನ್ನು 26 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 7500ಕ್ಕೂ ಅಧಿಕ ಮಂದಿ ರಿಟ್ವೀಟ್‌ ಮಾಡಿಕೊಂಡಿದ್ದಾರೆ.

 

Advertisement

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next