ಲಾಹೋರ್: ಪ್ರೀತಿಗೆ ಕಣ್ಣಿಲ್ಲ. ವಯಸ್ಸಿನ ಗಡಿಯೂ ಇಲ್ಲ. ಈ ಮಾತು ಎಷ್ಟೋ ಬಾರಿ ಸರಿಯಾಗಿಯೇ ಕಂಡಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಪಾಕಿಸ್ತಾನದಲ್ಲಾದ ಅಪರೂಪದ ಪ್ರೇಮ ಕಥೆ.
ಪಾಕಿಸ್ತಾನದ ಯೂಟ್ಯೂಬರ್ ಸೈಯದ್ ಬಸಿತ್ 19 ವರ್ಷದ ಯುವತಿ ಹಾಗೂ 70 ವರ್ಷದ ಮುದುಕನ ನಡುವಿನ ಪ್ರೇಮ ಕಥೆಯನ್ನು ರಿವೀಲ್ ಮಾಡಿದ್ದಾರೆ. ಅವರಿಬ್ಬರ ಇಂಟರ್ ವ್ಯೂ ಮಾಡಿ ಇಬ್ಬರ ಪ್ರೇಮದ ಹಿಂದಿನ ಕಥೆಯನ್ನು ಹೇಳಿದ್ದಾರೆ.
70 ವರ್ಷದ ಲಿಯಾಕತ್ ಅಲಿ ಅದೊಂದು ದಿನ ಬೆಳಗಿನ ಜಾವದ ವಾಕಿಂಗ್ ನಲ್ಲಿ 19 ವರ್ಷದ ಯುವತಿ ಶುಮೈಲಾ ಅಲಿಯನ್ನು ನೋಡುತ್ತಾರೆ. ಅವರಿಬ್ಬರ ನಡುವೆ ಮೊದಲ ನೋಟವೂ ಎಕ್ಸ್ ಚೇಂಜ್ ಆಗುತ್ತದೆ. ಒಂದು ದಿನ ಲಿಯಾಕತ್ ಅಲಿ ವಾಕಿಂಗ್ ಮಾಡುವಾಗ ಶುಮೈಲಾ ಅಲಿಯನ್ನು ಅವಳ ಹಿಂದೆ ಹಾಡನ್ನು ಹಾಡುತ್ತಾ ಸಾಗುತ್ತಾರೆ.
ಈ ಹಾಡು 19 ವರ್ಷದ ಯುವತಿಗೆ 70 ವರ್ಷದ ಮುದುಕನ ಮೇಲೆ ಪ್ರೀತಿ ಹುಟ್ಟುವಂತೆ ಮಾಡುತ್ತದೆ. ಇಬ್ಬರ ಬಳಿ ವಯಸ್ಸಿನ ಅಂತರದ ಬಗ್ಗೆ ಯೂಟ್ಯೂಬರ್ ಪ್ರಶ್ನೆ ಮಾಡಿದಾಗ “ ಪ್ರೀತಿಯಲ್ಲಿ ಬೀಳುವಾಗ ವಯಸ್ಸು ನೋಡುವುದಿಲ್ಲ. ಅದು ತಾನಾಗಿಯೇ ಆಗುತ್ತದೆ. ನನ್ನ ಪೋಷಕರು ನಮ್ಮ ಮದುವೆಗೆ ವಿರೋಧ ವ್ಯಕ್ಯಪಡಿಸಿದರು. ಬಳಿಕ ಬಹಳ ಸಮಯದ ನಂತರ ಅವರು ಮದುವೆಗೆ ಒಪ್ಪಿದರು” ಎಂದು ಶುಮೈಲಾ ಅಲಿ ಹೇಳುತ್ತಾರೆ.
Related Articles
“ಇಲ್ಲಿ ಚಿಕ್ಕವರು ದೊಡ್ಡವರು ಎನ್ನುವ ಪ್ರಶ್ನೆಯಿಲ್ಲ. ಯಾರಾದರೂ ಆಗಲಿ ಕಾನೂನು ಬದ್ದವಾಗಿ ಮದುವೆಯಾಗಲು ಅರ್ಹವಾಗಿದ್ದರೆ, ಮದುವೆ ಆಗಬಹುದು” ಎಂದು ಹೇಳುತ್ತಾರೆ ಲಿಯಾಕತ್.
ಮದುವೆಗೂ ಮುನ್ನ ಬೇರೆ ಯಾವುದಕ್ಕೂ ಮೊದಲು ವೈಯಕ್ತಿಕ ಘನತೆ ಮತ್ತು ಗೌರವವನ್ನು ಪರಿಗಣಿಸಬೇಕು ಎನ್ನುತ್ತಾರೆ ಶುಮೈಲಾ.
“ನನಗೆ 70 ವರ್ಷವಾದರೂ ನಾನು ಹೃದಯದಲ್ಲಿ ಇನ್ನೂ ಚಿಕ್ಕವನು. ಪ್ರೀತಿಯ ವಿಷಯಕ್ಕೆ ಬಂದಾಗ ವಯಸ್ಸು ಒಂದು ಅಂಶವಲ್ಲ” ಎಂದು ಲಿಯಾಕತ್ ಹೇಳುತ್ತಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಪ್ರೇಮ್ ಕಹಾನಿ ವೈರಲ್ ಆಗಿದೆ.