ಅಮ್ಮಂದಿರು ಅಂದ್ರೆ ಹಾಗೆ ಮಕ್ಕಳು ಅಂಗಡಿಯಿಂದ ಏನಾದ್ರು ವಸ್ತುಗಳನ್ನು ತಂದ್ರೆ ಅದರ ಬಗ್ಗೆ ಒಂಚೂರ ಹಾಸ್ಯದಿಂದ, ಒಂಚೂರು ವ್ಯಗ್ಯ ಮಾಡಿ, ತಮಾಷೆ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಅಮ್ಮ ತಮ್ಮ ಮಗಳು ತಂದಿರುವ ದುಬಾರಿ ಬೆಲೆಯ ಬೆಲ್ಟ್ ಅನ್ನು ನೋಡಿ ತಮಾಷೆ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ನ ಛಬಿ ಗುಪ್ತಾ ಎಂಬುವವರು ಗುಚ್ಚಿ ಕಂಪನಿಯ ₹35,000 ಬೆಲೆಯ ಬೆಲ್ಟ್ ಒಂದನ್ನ ತಂದಿದ್ದಾರೆ. ಇದನ್ನು ತಮ್ಮ ತಾಯಿ ಅನಿತಾ ಗುಪ್ತಾ ಅವರಿಗೆ ತೋರಿಸಿದ್ದಾರೆ. ಇದನ್ನು ನೋಡಿದ ಅಮ್ಮ ಶಾಲೆಯ ಮಕ್ಕಳು ಧರಿಸೋ ಬೆಲ್ಟ್ ಗೆ 35,000 ಕೊಡ್ತಾರಾ..? ಇದೇ ರೀತಿಯದ್ದು 150 ರೂಪಾಯಿಗೆ ಸಿಗ್ತಾ ಇತ್ತು ಎಂದು ಕಿಚಾಯಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.
ವಿಡಿಯೋದಲ್ಲಿ ಛಬಿ ಗುಪ್ತಾ ತಾಯಿ ಅನಿತಾ ಗುಪ್ತ ಹಸಿರು ಬಣ್ಣದ, ಜಿ ಜಿ ಎಂದು ಬರೆದಿರುವ ಬೆಲ್ಟ್ ಅನ್ನು ಕೈನಲ್ಲಿ ಹಿಡಿದುಕೊಂಡು ಇದು ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಲ್ಟಾ.. ಎಷ್ಟು ಬೆಲೆ ಅಂತ ಕೇಳಿದ್ದಾರೆ.. ಈ ವೇಳೆ ಛಬಿ ಗುಪ್ತಾ 35,000 ಅಂತ ಹೇಳಿದ್ದಾರೆ. ಮಗಳು ಹೇಳಿದ ಬೆಲೆ ಕೇಳಿದ ತಾಯಿ ಶಾಕ್ ಆಗಿ.. ಇದು 35,000 ದ ಬೆಲ್ಟಾ..? ಅಂಥಾದ್ದೇನಿದೆ ಇದ್ರಲ್ಲಿ..? ರಾಂಚಿಯಲ್ಲಿರೋ ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಲ್ಟ್ ಥರಾ ಕಾಣ್ತಿದೆ ಎಂದು ತಮಾಷೆ ಮಾಡಿದ್ದಾರೆ.
View this post on InstagramRelated Articles
AdvertisementA post shared by Anita Gupta & Chabi Gupta (@yourregularmom)